ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತ್ರಿಪುರಾದಲ್ಲಿ ಭುಗಿಲೆದ್ದ ಹಿಂಸಾಚಾರ: 'ಬಿಜೆಪಿಯ ಗೂಂಡಾ ವರ್ತನೆ' ಎಂದ ಸಿಪಿಐಎಂ

ಅಗರ್ತಲ: ತ್ರಿಪುರಾದ ಹಲವೆಡೆ ಆಡಳಿತಾರೂಢ ಬಿಜೆಪಿ ಮತ್ತು ಸಿಪಿಐ(ಎಂ) ಕಾರ್ಯಕರ್ತರ ನಡುವೆ ಬುಧವಾರ ಹಿಂಸಾತ್ಮಕ ಘರ್ಷಣೆ ನಡೆದಿದೆ.

ಅಗರ್ತಲ, ವೈಶಾಲ್‌ಗಡ, ಕಥಾಲಿಯಾಗಳಲ್ಲಿ ಸಿಪಿಐ(ಎಂ) ಕಚೇರಿಗಳನ್ನು ಧ್ವಂಸ ಮಾಡಲಾಗಿದ್ದು, ಬೆಂಕಿ ಹಚ್ಚಲಾಗಿದೆ. ಅಷ್ಟೇ ಅಲ್ಲದೆ ಹಲವು ಕಡೆ ಸಿಪಿಐ ಮುಖಂಡರ ಮೂರ್ತಿಗಳಿಗೆ ಹಾನಿ ಕೂಡಾ ಮಾಡಲಾಗಿದೆ ಎಂದು ವರದಿಯಾಗಿದೆ. ಪರಿಣಾಮ ತ್ರಿಪುರಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿರುವ ಸಿಪಿಐಎಂ, "ನಗರದಲ್ಲಿ ಬಿಜೆಪಿ ಶಾಂತಿ ಹಾಳುಗೆಡುವ ಕಾರ್ಯ ಮಾಡುತ್ತಿದೆ. ಸಿಪಿಐಎಂ ಕಚೇರಿ ಮುಂಭಾಗ ಹಲವು ಕಾರ್ಯಕರ್ತರು ಕಲ್ಲು ತೂರಿದ್ದಾರೆ. ಜೊತೆಗೆ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ" ಎಂದು ಆರೋಪಿಸಿದೆ.

ಆದರೆ ಬಿಜೆಪಿ ಉಪಾಧ್ಯಕ್ಷ ರಜಿಬ್ ಭಟ್ಟಾಚರ್ಜಿ, "ಬಿಜೆಪಿ ಕಾರ್ಯಕರ್ತರು ಸಿಪಿಐಎಂ ನಮ್ಮ ಮೇಲೆ ದಾಳಿಗೆ ಮುಂದಾಗಿದೆ. ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಸಿಪಿಐಎಂ ಷಡ್ಯಂತ್ರ ನಡೆಸುತ್ತಿದೆ" ಎಂದು ಪ್ರತ್ಯಾರೋಪ ಮಾಡಿದ್ದಾರೆ.

Edited By : Manjunath H D
PublicNext

PublicNext

09/09/2021 01:12 pm

Cinque Terre

119.39 K

Cinque Terre

42

ಸಂಬಂಧಿತ ಸುದ್ದಿ