ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಸ್ಲಿಂ ವಿರೋಧಿ ಘೋಷಣೆ: ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಉಪಾಧ್ಯಾಯ ಸೇರಿ ಐವರು ಅರೆಸ್ಟ್

ನವದೆಹಲಿ: ಪ್ರಚೋದಕ ಮತ್ತು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಸುಪ್ರೀಂ ಕೋರ್ಟ್‌ ವಕೀಲ ಮತ್ತು ದೆಹಲಿ ಬಿಜೆಪಿ ಮಾಜಿ ವಕ್ತಾರ ಅಶ್ವಿನಿ ಉಪಾಧ್ಯಾಯ ಸೇರಿದಂತೆ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೇಶದಲ್ಲಿ ವಸಹಾತುಶಾಹಿ ಕಾಲದ ಕಾನೂನುಗಳನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಭಾನುವಾರ ಅಶ್ವಿನಿ ಉಪಾಧ್ಯಾಯ ಸಮಾವೇಶ ನಡೆಸಿದ್ದರು. ಆದರೆ ಈ ಸಮಾವೇಶದಲ್ಲಿ 'ಪ್ರಚೋದಕ ಮತ್ತು ಮುಸ್ಲಿಂ ವಿರೋಧಿ' ಘೋಷಣೆಗಳನ್ನು ಕೂಗಿದ ಆರೋಪ ಕೇಳಿ ಬಂದಿದೆ.

ಉಪಾಧ್ಯಾಯರಲ್ಲದೆ, ಬಂಧಿತರನ್ನು ಸುದರ್ಶನ್ ವಾಹಿನಿಯ ಮುಖ್ಯಸ್ಥ ದೀಪಕ್ ಸಿಂಗ್ ಹಿಂದು, ವಿನೀತ್ ಕ್ರಾಂತಿ, ಪ್ರೀತ್ ಸಿಂಗ್ ಮತ್ತು ವಿನೋದ್ ಶರ್ಮಾ ಎಂದು ಗುರುತಿಸಲಾಗಿದೆ.

Edited By : Vijay Kumar
PublicNext

PublicNext

10/08/2021 09:47 am

Cinque Terre

153.98 K

Cinque Terre

35

ಸಂಬಂಧಿತ ಸುದ್ದಿ