ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಧಿತ ಪತ್ರಕರ್ತ ಮೊಹಮ್ಮದ್ ಜುಬೈರ್ ಖಾತೆಯಲ್ಲಿ 50 ಲಕ್ಷ ಹಣ ಜಮೆ

ನವದೆಹಲಿ: ಧಾರ್ಮಿಕ ದ್ವೇಷ ಹರಡಿದರೆಂಬ ಆರೋಪದಲ್ಲಿ ನವದೆಹಲಿ ಪೊಲೀಸರು ಪತ್ರಕರ್ತ ಮೊಹಮ್ಮದ್ ಜುಬೈರ್ ಅವರನ್ನು ಸೋಮವಾರ ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ಗಮನಿಸಬೇಕಾದ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಮೊಹಮ್ಮದ್ ಜುಬೈರ್ ಅವರ ಬ್ಯಾಂಕ್ ಖಾತೆಯಲ್ಲಿ 50 ಲಕ್ಷ ಹಣ ಜಮೆಯಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಜಗತ್ತಿನಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ಮೌನ ಮುರಿದಿದ್ದ ನೂಪುರ್ ಶರ್ಮಾ 'ನಾನು ಮಾತನಾಡಿದ್ದರಲ್ಲಿ ವಿವಾದದ ಅಂಶವನ್ನಷ್ಟೇ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮದ್ ಜುಬೈರ್ ಟ್ವಿಟ್ಟರ್‌ನಲ್ಲಿ ಹಾಕಿದ್ದಾನೆ. ತನಗೇನಾದರೂ ಅಪಾಯವಾದರೆ ಅದೆಲ್ಲದಕ್ಕೂ ಜುಬೈರ್ ಕಾರಣ ಎಂದು ಹೇಳಿದ್ದರು.

ಆದರೆ, ಮೊಹಮದ್ ಜುಬೇರ್ ಅವರನ್ನು ಬಂಧನ ಮಾಡಿರುವುದು ಈ ಪ್ರಕರಣದಲ್ಲಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಜುಬೇರ್‌ರನ್ನು ಬಂಧಿಸಲಾಗಿದ್ದು, ಇದರ ನಡುವೆ ಅವರ ಖಾತೆಯಲ್ಲಿ ಕಳೆದ 3 ತಿಂಗಳಲ್ಲಿ 50 ಲಕ್ಷ ಠೇವಣಿಯಾಗಿದೆ ಎನ್ನುವ ಮಾಹಿತಿಯೂ ಪೊಲೀಸ್ ಮೂಲಗಳಿಂದ ಹೊರಬಿದ್ದಿದೆ.

ಹಣವನ್ನು ವರ್ಗಾಯಿಸಿದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಐಡಿ ಮತ್ತು ಅದನ್ನು ಯಾವುದಕ್ಕಾಗಿ ಬಳಸಲಾಗಿದೆ ಎಂಬುದನ್ನು ಒಳಗೊಂಡಂತೆ ಈ ವಹಿವಾಟುಗಳನ್ನು ತನಿಖೆ ಮಾಡುವುದಾಗಿ ದೆಹಲಿ ಪೊಲೀಸರು ಮಂಗಳವಾರ ಹೇಳಿದ್ದಾರೆ. ಜುಬೈರ್ ಕೂಡ ಸಾಕಷ್ಟು ದೇಣಿಗೆ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ. ಈ ದೇಣಿಗೆ ನೀಡಿದವರು ಯಾರು ಮತ್ತು ಇದರ ಹಿಂದಿನ ಉದ್ದೇಶದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸ್ ಇನ್ನೂ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಸ್ತರಣೆ ಮಾಡುವಂತೆ ಕೇಳಿಕೊಂಡಿದೆ.

Edited By : Nagaraj Tulugeri
PublicNext

PublicNext

29/06/2022 09:30 am

Cinque Terre

73.55 K

Cinque Terre

2

ಸಂಬಂಧಿತ ಸುದ್ದಿ