ಹೈದರಾಬಾದ್: ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ 2 ಚಿತ್ರದ ಪ್ರದರ್ಶನದ ವೇಳೆ ನಡೆದ ದುರಂತಕ್ಕೆ ನಟ ಅಲ್ಲು ಅರ್ಜುನ್ ಹೊಣೆಯಲ್ಲ ಎಂದು ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಪತಿ ಹೇಳಿದ್ದಾರೆ. ಮಹಿಳೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈದರಾಬಾದ್ ಪೊಲೀಸರು ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರು. ಬಳಿಕ ನಾಂಪಲ್ಲಿ ನ್ಯಾಯಾಲಯ ಅಲ್ಲು ಅರ್ಜುನ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳೆಯ ಪತಿ ಭಾಸ್ಕರ್,ಘಟನೆ ಕುರಿತು ದಾಖಲಿಸಿರುವ ಕೇಸ್ ನ್ನು ವಾಪಸ್ ಪಡೆಯುವುದಾಗಿ ತಿಳಿಸಿದರು. ಘಟನೆಗೆ ಥಿಯೇಟರ್‌ಗೆ ಬರುತ್ತಿದ್ದ ಅಲ್ಲು ಅರ್ಜುನ್ ಕಾರಣವಲ್ಲ, ಕೇಸ್ ವಾಪಸ್ ಪಡೆಯಲು ಸಿದ್ದನಿದ್ದೇನೆ ಎಂದರು.
PublicNext
14/12/2024 07:57 am