ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಆದರೆ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಮುನ್ನವೇ ಪೈರಸಿ ಕಾಟ ಶುರುವಾಗಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ವಿಕಾಸ ಸೌಧದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಕೋಟಿಗೊಬ್ಬ -3 ಸಿನಿಮಾ ಪೈರಸಿ ವಿಚಾರವಾಗಿ ನನಗೆ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದಾರೆ. ಇದು ಆರ್ಗ್ ನೈಸಡ್ ಕ್ರೈಂ ಎಂದು ಅನಿಸುತ್ತಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ನಿರ್ಮಾಣ ಮಾಡಿರುತ್ತಾರೆ. ಸಿನಿಮಾದಿಂದ ಅನೇಕ ಜನರಿಗೆ ಸಿನಿಮಾದಿಂದ ಉದ್ಯೋಗ ಸಿಗುತ್ತದೆ. ಆದರೆ ಕೆಲವರು ಪೈರಸಿ ಮಾಡುತ್ತಾರೆ ಪೈರಸಿ ಮಾಡುವಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ಅತ್ಯಾಚಾರಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಪ್ರಕಟವಾದ ಬಗ್ಗೆ ಮಾತನಾಡಿ ಅವನೊಬ್ಬ ವಿಕೃತ, ಅಮಾನವೀಯ ವ್ಯಕ್ತಿ ಅವನಿಗೆ ಕೊಟ್ಟಿರುವ ಶಿಕ್ಷೆ ಸ್ವಾಗತಾರ್ಹ. ಇಂತಹ ಘೋರ ಕೃತ್ಯಗಳನ್ನು ಎಸಗಿದ ಆತನಿಗೆ ಕೋರ್ಟ್ ನೀಡಿದ ಶಿಕ್ಷೆ ಸ್ವಾಗತಾರ್ಹ ಎಂದರು.
ಆರ್ ಎಸ್ ಎಸ್ ತಾಲಿಬಾನ್ ಮನಸ್ಥಿತಿ ಹೇಳಿಕೆ ವಿಚಾರವಾಗಿ ಮಾತನಾಡಿ ಪ್ರಧಾನಿ, ಸಿಎಂ ಹಾಗೂ ನಾನು ಆರ್ ಎಸ್ ಎಸ್ ನಿಂದ ಬಂದವರು ಆರ್ ಎಸ್ ಎಸ್ ನಮಗೆ ರಾಷ್ಟ್ರಪ್ರೇಮ ತುಂಬಿದೆ. ಸ್ವಾತಂತ್ರ್ಯ ಹೋರಾಟಕ್ಕೂ ಸಿದ್ದರಾಮಯ್ಯಗೂ ಏನು ಸಂಬಂಧ ಇತ್ತೀಚೆಗೆ ಅವರು ಏನೆನೋ ಮಾತನಾಡುತ್ತಿದ್ದಾರೆ. ಆರ್ ಎಸ್ ಎಸ್ ಸಂಸ್ಥಾಪಕ ಹೆಡೆಗೆವಾರ್ ಸ್ವಾತಂತ್ರ್ಯ ಹೋರಾಟದಲ್ಲಿದ್ದರು. ಆರ್ ಎಸ್ ಎಸ್ ಬಗ್ಗೆ ಸಿದ್ದರಾಮಯ್ಯ ಮಾತನಾಡಿ ಮತ್ತಷ್ಟು ಕೆಳಗೆ ಹೋಗುತ್ತಿದ್ದಾರೆ. ಆದರೆ ನಾವು ಆರ್ ಎಸ್ ಎಸ್ ನಿಂದ ಬಂದವರೆಂಬ ಹೆಮ್ಮೆ ಇದೆ ಎಂದರು.
PublicNext
29/09/2021 07:37 pm