ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿ ಕಾಶ್ಮೀರ್ ಫೈಲ್ಸ್ ರಿಯಾಯಿತಿ;ಆಮ್ ಆದ್ಮಿ ಹೇಳಿಕೆಗೆ ಎಲ್ಲರೂ ಶಾಕ್ !

ನವದೆಹಲಿ: ಭಾರತೀಯ ಸಿನಿಮಾರಂಗದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಂಚಲನ ಸೃಷ್ಟಿಸಿದೆ. ಬಹುತೇಕ ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನೂ ನೀಡಿವೆ. ಆದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ವಿಚಾರದಲ್ಲಿ ಬಿಜೆಪಿ ನಾಯಕರು ಸೇರಿದಂತೆ ಸಿನಿಮಾ ಮಂದಿಗೂ ಶಾಕ್ ಕೊಟ್ಟಿದ್ದಾರೆ.

ಅರವಿಂದ್ ಕೇಜ್ರಿವಾಲ್ ದೆಹಲಿ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ನಾಯಕರಿಗೆ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯತಿ ಕೇಳೋದು ಸರಿ ಅಲ್ಲವೇ ಅಲ್ಲ. ಅದರ ಬದಲು ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಆ ಚಿತ್ರವನ್ನ ಯುಟ್ಯೂಬ್ ನಲ್ಲಿ ಅಪ್‌ ಲೋಡ್ ಮಾಡಲು ಹೇಳಿ ಅಂತಲೇ ಕೇಜ್ರಿವಾಲ್ ನೇರವಾಗಿಯೇ ಬಿಜೆಪಿ ನಾಯಕರಿಗೆ ಹೇಳಿ ಬಿಟ್ಟಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಡಲೇಬೇಕು ಅಂತಲೇ ಬಿಜೆಪಿ ನಾಯಕರು ಬುಧವಾರ ಅಧಿವೇಶ ಅಡ್ಡಿ ಪಡಿಸಿದ್ದರು. ಬಳಿಕ ಮರುದಿನವೇ ಗುರುವಾರ ಕೇಜ್ರಿವಾಲ್ ಯಾಕೆ ರಿಯಾತಿ ಕೊಡಬೇಕು ಅನ್ನೋದನ್ನ ತಮ್ಮದೇ ಶೈಲಿಯಲ್ಲಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Edited By :
PublicNext

PublicNext

25/03/2022 12:20 pm

Cinque Terre

78.64 K

Cinque Terre

21