ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆಯದಿರಲು CM ಗೆ ಮನವಿ ಮಾಡಿದ ಶಿವಣ್ಣ

ಬೆಂಗಳೂರು : ಪುನೀತ್ ಅಗಲಿಕೆಯ ನಂತರ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿ ನೂರು ಕೋಟಿ ಕ್ಲಬ್ ಸೇರಿದ ಜೇಮ್ಸ್ ಚಿತ್ರಕ್ಕೆ ಕಂಟಕ ಎದುರಾಗ್ತಿದೆ. ನಾಳೆ ರಾಜಮೌಳಿ ನಿರ್ದೇಶನದ RRR ಚಿತ್ರ ಬಿಡುಗಡೆಯಾಗ್ತಿದ್ದು, ಚಿತ್ರಮಂದಿರಗಳ ಮಾಲೀಕರು ಜೇಮ್ಸ್ ಚಿತ್ರದ ಬದಲಿಗೆ ತೆಲುಗು ಚಿತ್ರ ಪ್ರದರ್ಶನಕ್ಕೆ ಮುಂದಾಗ್ತಿರುವುದು ಜೇಮ್ಸ್ ತಂಡಕ್ಕೆ ತೊಂದರೆ ತಂದೊಡ್ಡಿದೆ.

ಇದರಿಂದ ಶಿವಣ್ಣ ಮತ್ತು ಗೀತಾ ದಂಪತಿ ಹಾಗು ನಿರ್ಮಾಪಕ ಜೇಮ್ಸ್ ಚಿತ್ರಕ್ಕೆ ಎದುರಾಗಿರುವ ತೊಂದರೆ ನೀಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಲ್ಲಿ ಮನವಿ ಮಾಡಿದರು. ಬೊಮ್ಮಾಯಿಯವರು ಸೂಕ್ತವಾಗಿ ಸ್ಪಂದಿಸಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Edited By : Nirmala Aralikatti
PublicNext

PublicNext

24/03/2022 09:42 pm

Cinque Terre

32.27 K

Cinque Terre

2

ಸಂಬಂಧಿತ ಸುದ್ದಿ