ಲಕ್ನೋ: 'ಕಾಶ್ಮೀರ್ ಫೈಲ್ಸ್' ಆಯ್ತು, ಇನ್ನು 'ಲಖಿಂಪುರ್ ಫೈಲ್ಸ್' ಮಾಡಿ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
ಕಾಶ್ಮೀರದಲ್ಲಿ ಪಂಡಿತರ ಮೇಲಿನ ಹಿಂಸಾಚಾರದ ಕುರಿತಾಗಿ ಬಂದಿರುವ ದಿ ಕಾಶ್ಮೀರ ಫೈಲ್ಸ್ ಚಿತ್ರದ ಬಗ್ಗೆ ಸೀತಾಪುರದಲ್ಲಿ ಮಾತನಾಡಿದ ಅವರು, "ಕಾಶ್ಮೀರ ಫೈಲ್ಸ್ ಚಿತ್ರವನ್ನು ಮಾಡಬಹುದಾದರೆ, ಲಖೀಂಪುರದಲ್ಲಿ ಜೀಪ್ ಹತ್ತಿಸಿ ಪ್ರತಿಭಟನಾನಿರತರನ್ನು ಹತ್ಯೆ ಮಾಡಿದ ಘಟನೆಯ ಬಗ್ಗೆ ಲಖೀಂಪುರ ಫೈಲ್ಸ್ ಅನ್ನು ಏಕೆ ಮಾಡಬಾರದು. ಕಾಶ್ಮೀರದಲ್ಲಿ ಪಂಡಿತರ ಮೇಲಿನ ಹಿಂಸಾಚಾರದ ಪರವಾದ ಕಥೆಯನ್ನು ದಿ ಕಾಶ್ಮೀರ ಫೈಲ್ಸ್ ಹೊಂದಿದೆ ಎಂದು ಹೇಳುತ್ತಾರೆ. ಲಖೀಂಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಲಖೀಂಪುರ ಫೈಲ್ಸ್ ಕೂಡ ಮಾಡಬಹುದಲ್ಲವೇ? ಪಕ್ಕದ ಜಿಲ್ಲೆಯಲ್ಲಿಯೇ ಜೀಪ್ ಹತ್ತಿಸಿ ರೈತರ ಹತ್ಯೆ ಮಾಡಲಾಯಿತು. ಬಹುಶಃ ಮುಂದೊಂದು ದಿನ ಲಖೀಂಪುರ ಹಿಂಸಾಚಾರದ ಕುರಿತಾಗಿಯೂ ಚಿತ್ರ ಬರಬಹುದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
PublicNext
16/03/2022 08:58 pm