ಮುಂಬೈ:ಭಾರತ ದೇಶವನ್ನ ಮೊಘಲರು ಸರ್ವನಾಶ ಮಾಡಿ ಹೋಗಿದ್ದಾರೆ. ಇತಿಹಾಸ ಪುಟಗಳು ಕೂಡ ಇದನ್ನೇ ಹೇಳುತ್ತಿವೆ. ಆದರೆ ಬಾಲಿವುಡ್‌ನ ಹಿರಿಯ ನಟ ನಾಸೀರುದ್ದೀನ್ ಶಾ ಮೊಘಲರನ್ನು ನಿರಾಶ್ರಿತರು ಎಂದು ಕರೆದು ಈಗ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ.ಕೆಲವರ ಕೆಂಗಣ್ಣಿಗೂ ಗುರಿ ಆಗುತ್ತಿದ್ದಾರೆ.
ಹೌದು ಮೊಘಲರ ಕೊಡುಗೆ ಭಾರತದಲ್ಲಿ ಜಾಸ್ತಿನೇ ಇದೆ. ನೃತ್ಯ-ಸಂಗೀತ-ಕಲೆ ಇವೆಲ್ಲ ಮೊಘಲರು ಕೊಟ್ಟ ಕೊಡುಗೆಗಳೇ ಅಂತಲೇ ನಾಸೀರುದ್ಧಿನ್ ಶಾ ಬಣ್ಣಿಸಿದ್ದಾರೆ.
ಕರಣ್ ಥಾಪರ್ ಯುಟ್ಯೂಬ್ ಚಾನೆಲ್ ದಿ ವೈರ್ ವೆಬ್ ಸೈಟ್ ನಲ್ಲಿ ಹೀಗೆ ನಾಸೀರುದ್ಧಿನ್ ಶಾ ಮಾತನಾಡಿದ್ದಾರೆ. ಅದೇ ವೀಡಿಯೋನೇ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪರ-ವಿರೋಧ ಚರ್ಚೆಗಳೂ ಈಗ ಶುರು ಆಗಿವೆ. ಕೆಲವರು ಆಕ್ರೋಶ ಕೂಡ ವ್ಯಕ್ತಪಡಿಸುತ್ತಿದ್ದಾರೆ.
PublicNext
30/12/2021 05:21 pm