ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎಂದ ಹಂಸಲೇಖ

ಬೆಂಗಳೂರು: ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮಾಕ್ರೆಸಿಯನ್ನು ಉಳಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗಬೇಕಿದೆ. ಎನ್ನುವ ಮೂಲಕ ಚಿತ್ರಸಂಗೀತ ನಿರ್ದೇಶಕ ಹಂಸಲೇಖ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ನಗರದ ಗಾಂಧಿ ಭವನದಲ್ಲಿ ಎಸ್.ಜಿ ಸಿದ್ದರಾಮಯ್ಯ ಅವರ ಆತ್ಮ ಕಥನ ‘ಯರೆಬೇವು’ ಪುಸ್ತಕ ಬಿಡುಗಡೆ ಹಾಗೂ ಡಾ. ಎಂ.ಎಂ ಕಲಬುರ್ಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಹಂಸಲೇಖ, ಇತ್ತೀಚೆಗೆ ಒಂದು ಸಮಸ್ಯೆ ಆಗಿ ನನಗೆ ಗೊತ್ತಿಲ್ಲದ ಸಮುದಾಯದವರೆಲ್ಲ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಆ ವೇಳೆ ಪ್ರತ್ಯಕ್ಷವಾಗಿ ನನ್ನೊಂದಿಗೆ ನಿಂತವರು ಎಸ್.ಜಿ ಸಿದ್ದರಾಮಯ್ಯ ಹಾಗೂ ನಾಗರಾಜ ಮೂರ್ತಿ. ಯಾರಿಗೂ ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದರು. ಇದಕ್ಕೆಲ್ಲ ನಾನು ಭಯಪಡುವವನಲ್ಲ. ಮಾಗಡಿ ರಸ್ತೆಯಲ್ಲಿ ನಾನು ಒಂದು ದೊಡ್ಡ ದೊಡ್ಡ ಪೋಲಿ ಆಟಗಳನ್ನೇ ಆಡಿಬಂದಿದ್ದೇನೆ. ಅದಕ್ಕೆಲ್ಲ ಒಂದು ಚರಿತ್ರೆಯೇ ಇದೆ. ಸದ್ಯ ಬಿಡುಗಡೆಯಾದ ಎರೆಬೇವು ಪುಸ್ತಕ ದೇಸಿ ಸಮುದಾಯದ ಕರುಳಿನ ಕಥೆಯಾಗಿದೆ. ಹೆಚ್ಚು ಕಡಿಮೆ ನಮ್ಮದೂ ಇದೇ ಕಥೆ. ಈಗ ನನಗೆ ಎಪ್ಪತ್ತು, ತಿನ್ನೋದು ಒಪ್ಪತ್ತು, ಎರಡು ಹೊತ್ತು ಬಸವನ ಹಸಿವು ಪ್ರೋಟೀನ್ ಕೊಡುತ್ತೆ ಎಂದರು.

ಮೊದಲ ಬಾರಿ ನಾನು ಭಾಷಣ ಬರೆದುಕೊಂಡು ಬಂದು ಮಾತಾಡುತ್ತೀದ್ದೇನೆ. ನುಡಿದರೆ ಮುತ್ತಿನ ಹಾರದಂತಿರಬೇಕು ಅಂತ ಮಾತಾಡ್ತೇವೆ ಆದರೆ ಒಳಗಡೆಯಿಂದ ನಮ್ಮ ಮಾತು ಸ್ಪಟಿಕದ ಸಲಾಖೆಯಂತೆ ಇರುತ್ತದೆ. ಬರೆದುಕೊಳ್ಳದೇ ಮಾತಾಡಿದರೆ ಆಗುವ ಅಪಾಯ ತಡೆಯಲು ಇಲ್ಲಿ ಬರೆದುಕೊಂಡು ಬಂದು ಮಾತನಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನಮ್ಮ ದೇಸಿ ಶಾಲೆಗೆ ಸಹಾಯ ಮಾಡಿದ್ದರು. ಅವರು ಮತ್ತೊಮ್ಮೆ ಸಿಎಂ ಆಗಬೇಕು ಎಂದು ಹಂಸಲೇಖ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

26/12/2021 05:04 pm

Cinque Terre

79.95 K

Cinque Terre

73