ಮುಂಬೈ: ಮೂರು ಕೃಷಿ ಕಾನೂನುಗಳ ರದ್ದತಿಯನ್ನು ರೈತರು ಸ್ವಾಗತಿಸಿ ಸಂಭ್ರಮಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಈ ಕ್ರಮವನ್ನು ನಟಿ ಕಂಗನಾ ರಣಾವತ್ ವಿರೋಧಿಸಿದ್ದಾರೆ. ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಕಂಗನಾ ಹೇಳಿಕೆಗೆ ನಟಿಜನ್‌ಗಳು ಕಂಗನಾ ಮೇಲೆ ಮತ್ತೊಮ್ಮೆ ಆಕ್ರೋಶಿತರಾಗಿದ್ದಾರೆ.
ಗುರುನಾನಕ್ ಅವರ ಜಯಂತಿಯಂದು ಶುಕ್ರವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದರು. ಈ ನಿರ್ಧಾರವನ್ನು ಪ್ರತಿಪಕ್ಷಗಳು ಮತ್ತು ರೈತ ಚಳವಳಿಗಾರರು ಸ್ವಾಗತಿಸಿದ್ದಾರೆ. ಆದರೆ, ಕಂಗನಾ ರಣಾವತ್ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಹೋರಾಟದ ಫಲಿತಾಂಶವು ಶಕ್ತಿಶಾಲಿ ಎಂದು ಸಾಬೀತಾಗಿದೆ ಎಂದು ನೆಟಿಜನ್ ಪೋಸ್ಟ್ ಅನ್ನು ಹಂಚಿಕೊಂಡಿರುವ ಕಂಗನಾ, ಇದು ತುಂಬಾ ದುಃಖ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಇದು ಸಂಪೂರ್ಣ ಅನ್ಯಾಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
PublicNext
20/11/2021 08:08 am