ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ ಸಮಯ ಸಿಕ್ಕಾಗಲೆಲ್ಲ ತಮ್ಮ ತೋಟದ ಮನೆಗೆ ಹೋಗಿ ಅಲ್ಲಿರುವ ಪ್ರಾಣಿಗಳ ಆರೈಕೆ ಮಾಡುತ್ತಾರೆ. ಪ್ರಾಣಿಗಳು ಹಾಗೂ ಕೃಷಿ ಎಂದರೆ ಡಿ ಬಾಸ್‌ಗೆ ತುಂಬಾ ಪ್ರೀತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಅವರು ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿದ್ದಾರೆ.
ಹೌದು. ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಅವರು ಈಗ ಯಾವುದೇ ಸಂಭಾವನೆ ಪಡೆಯದೇ ಕೃಷಿ ಇಲಾಖೆಯ ರಾಯಭಾರಿ ಆಗಲು ಒಪ್ಪಿಕೊಂಡಿದ್ದಾರಂತೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಡಿ ಬಾಸ್ ಅವರನ್ನು ಭೇಟಿ ಮಾಡಿದ್ದಾರೆ. ದರ್ಶನ್ ಅವರ ತೋಟದಲ್ಲಿ ಸುತ್ತಾಡಿರುವ ಸಚಿವ ಬಿ.ಸಿ.ಪಾಟೀಲ್ ಅವರು ಕೃಷಿ ಇಲಾಖೆಯ ರಾಯಭಾರಿಯಾಗುವಂತೆ ಮನವಿ ಮಾಡಿದ್ದಾರಂತೆ. ಇದಕ್ಕೆ ಒಪ್ಪಿಕೊಂಡಿರುವ ದರ್ಶನ್ ಶೀಘ್ರದಲ್ಲೇ ರೈತ ಪರ ಕಾರ್ಯಕ್ರಮಗಳಲ್ಲಿ ಸರ್ಕಾರದ ಮುಖವಾಗಲಿದ್ದಾರೆ ಎನ್ನಲಾಗಿದೆ.
PublicNext
25/01/2021 10:55 am