ತಿರುಮಲ ತಿರುಪತಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲು ಅಲ್ಲಿನ ಟಿಟಿಡಿ ಅಧಿಕಾರಿಗಳು ಲಂಚ ಕೇಳಿದ್ದಾರೆ ಅಂತಾ ನಟಿ ಹಾಗೂ ಕಾಂಗ್ರೆಸ್ ಪಕ್ಷದ ಎಂಎಲ್‌ಎ ಅಭ್ಯರ್ಥಿ ಅರ್ಚನಾ ಗೌತಮ್ ಆರೋಪ ಮಾಡಿದ್ದಾರೆ. ಆರೋಪ ತಳ್ಳಿಹಾಕಿರುವ ಟಿಟಿಡಿ, ದರ್ಶನಕ್ಕೆ ವಿಶೇಷ ಟಿಕೆಟ್ ಖರೀದಿ ಮಾಡುವಂತೆ ಸಲಹೆ ನೀಡಿದ್ದಾಗಿ ಹೇಳಿದೆ.
ಅದನ್ನು ತಪ್ಪಾಗಿ ಅರ್ಥಮಾಡಿಕೊಂಡಿರೋ ಅರ್ಚನಾ ಗೌತಮ್, ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಭಾವಿಸಿದ್ದಾರೆ ಅಂತ ಟಿಟಿಡಿ ಸ್ಪಷ್ಟನೆ ನೀಡಿದೆ. “ಭಾರತದ ಹಿಂದೂ ಧಾರ್ಮಿಕ ಸ್ಥಳಗಳು ಲೂಟಿಯ ಗುಹೆಯಾಗಿ ಮಾರ್ಪಟ್ಟಿವೆ. ಧರ್ಮದ ಹೆಸರಿನಲ್ಲಿ
ತಿರುಪತಿ ಬಾಲಾಜಿ ದೇವಾಲಯದಲ್ಲಿ ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸಲಾಗುತ್ತಿದೆ.
ಟಿಟಿಡಿ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ನಾನು ಆಂಧ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ವಿಐಪಿ ದರ್ಶನದ ಹೆಸರಿನಲ್ಲಿ ಒಬ್ಬರಿಂದ 10,500 ರೂಪಾಯಿ ವಸೂಲಿ ಮಾಡಲಾಗುತ್ತಿದೆʼʼ ಅಂತಾ ಅರ್ಚನಾ ಗೌತಮ್ ಟ್ವೀಟ್ ಮಾಡಿದ್ದಾರೆ.
ಇದರ ಜೊತೆಗೆ ವಿಡಿಯೋ ಒಂದನ್ನು ಸಹ ಅರ್ಚನಾ ಅಪ್ಲೋಡ್ ಮಾಡಿದ್ದಾರೆ. ಅಧಿಕಾರಿಗಳು ಆಕೆಯನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದಾರೆ, ಪರಿಸ್ಥಿತಿಯನ್ನು ವಿವರಿಸಲು ಮುಂದಾಗಿದ್ದಾರೆ. ಆದ್ರೆ ಆಕೆ ಸಿಬ್ಬಂದಿಯನ್ನೇ ತಳ್ಳಿ ಕಚೇರಿಯಲ್ಲಿ ಗದ್ದಲ ಎಬ್ಬಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಅರ್ಚನಾ ಶುಕ್ರವಾರ ಬೆಳಿಗ್ಗೆ ಅರ್ಜಿ ಸಲ್ಲಿಸಿದ್ದರು. ಕೊಡಲಿಲ್ಲ ಎಂಬ ಕಾರಣಕ್ಕೆ ಕಚೇರಿಗೆ ತೆರಳಿ ಗದ್ದಲ ಎಬ್ಬಿಸಿದ್ದಾರೆ. ಟಿಟಿಡಿ ಸಿಬ್ಬಂದಿಯನ್ನೂ ತಳ್ಳಿದ್ದಾಳೆ. ಮರುದಿನ ಬೆಳಿಗ್ಗೆ 10,000 ರೂಪಾಯಿ ಬೆಲೆಯ ‘ಶ್ರೀ ವಾಣಿ ಟಿಕೆಟ್’ ತೆಗೆದುಕೊಳ್ಳಲು ಯಾರೋ ಸಲಹೆ ನೀಡಿದರು. ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಭಾವಿಸುವ ಆಕೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅಂತಾ ಟಿಟಿಡಿ ತಿಳಿಸಿದೆ.
PublicNext
06/09/2022 06:01 pm