ಬೆಂಗಳೂರು: ನನ್ನನ್ನು ರಾಜಕೀಯಕ್ಕೆ ಕರೆತಂದಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಅವರು ಅವತ್ತೂ ನನ್ನ ಗೆಳೆಯ, ಇಂದಿಗೂ ಒಳ್ಳೆ ಫ್ರೆಂಡ್ ಎಂದು ನವರಸ ನಾಯಕ, ಬಿಜೆಪಿ ಮುಖಂಡ ಜಗ್ಗೇಶ್ ಹೇಳಿದ್ದಾರೆ.
ಸಿನಿಮಾರಂಗದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ನನ್ನ ಸಹೋದರ ಇದ್ದಂತೆ. ಅವರೇ ನನ್ನ ರಾಜಕೀಯಕ್ಕೆ ಕರೆತಂದರು.ಇಂದು ಬಿಜೆಪಿ ಪಕ್ಷದ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನಡೆಸುವ ಪಕ್ಷದಲ್ಲಿ ಇರುವುದೇ ನನ್ನ ಭಾಗ್ಯ ಎಂದರು.
PublicNext
24/11/2020 04:24 pm