ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 2 ಒಮಿಕ್ರಾನ್ ಕೇಸ್ ಪತ್ತೆ!; ರಾಜ್ಯದಲ್ಲಿ ಇಂದು ಐವರಲ್ಲಿ ಸೋಂಕು ದೃಢ

ಉಡುಪಿ: ಉಡುಪಿಯಲ್ಲಿ ಎರಡು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ.

ಉಡುಪಿಯ 73 ವರ್ಷದ ಮಹಿಳೆ ಮತ್ತು 82 ವರ್ಷದ ಪುರುಷನಲ್ಲಿ ಈ ರೂಪಾಂತರಿ ಸೋಂಕು ಕಂಡುಬಂದಿದೆ!

ಗಮನಾರ್ಹ ಸಂಗತಿ ಎಂದರೆ ಈ ಇಬ್ಬರು ಎರಡೂ ಡೋಸ್ ಲಸಿಕೆ ಪಡೆದುಕೊಂಡವರೇ ಆಗಿದ್ದಾರೆ.

ಕುಟುಂಬದಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಇವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಬಳಿಕ ಒಮಿಕ್ರಾನ್ ಇರುವುದು ದೃಢಗೊಂಡಿದೆ. ಡಬ್ಲ್ಯೂಜಿಎಸ್ ಪರೀಕ್ಷೆಯಲ್ಲಿ ಇಬ್ಬರಿಗೆ ಒಮಿಕ್ರಾನ್ ದೃಢಗೊಂಡಿದ್ದು, ಇದೀಗ

ಸೋಂಕು ಹರಡಿದ ಮೂಲ ಸಂಪರ್ಕಿತರನ್ನು ಇಲಾಖೆ ಪತ್ತೆ ಹಚ್ಚುತ್ತಿದೆ.

ಇವತ್ತು ಉಡುಪಿ, ಭದ್ರಾವತಿ, ಧಾರವಾಡ,‌ ಮಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 5 ಒಮಿಕ್ರಾನ್ ಪ್ರಕರಣ ದೃಢಗೊಂಡಿವೆ.

Edited By :
PublicNext

PublicNext

20/12/2021 09:19 am

Cinque Terre

65.46 K

Cinque Terre

1

ಸಂಬಂಧಿತ ಸುದ್ದಿ