ಬೆಂಗಳೂರು: ರಾಜಧಾನಿ ಬೆಂಗಳೂರು ದಿನೇ ದಿನೇ ಜಲಾವೃತವಾಗಲು ಇಲ್ಲಿನ ಶಾಸಕರು ಹಾಗೂ ಸಂಸದರ ರಿಯಲ್ ಎಸ್ಟೇಟ್ ಉದ್ಯಮವೇ ಕಾರಣ ಎಂದು ನಟಿ ರಮ್ಯಾ ಕಿಡಿ ಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಿತಿ ಮೀರಿದೆ. ಕರ್ನಾಟಕದಲ್ಲಿ ಎಷ್ಟು ಶಾಸಕರು, ಸಂಸದರು ರಿಯಲ್ ಎಸ್ಟೇಟ್ ಉದ್ಯಮ ಮಾಡ್ತಿದಾರೆ ನಿಮಗೆ ಗೊತ್ತಾ? ಎಂದು ಪ್ರಶ್ನೆ ಮಾಡಿರುವ ನಟಿ ರಮ್ಯಾ, ಇದಕ್ಕೆ ತಾವೇ ಉತ್ತರಿಸಿದ್ದಾರೆ. ಇರುವ 28 ಶಾಸಕರಲ್ಲಿ 26 ಶಾಸಕರು 26 ಶಾಸಕರು ರಿಯಲ್ ಎಸ್ಟೇಟ್ ಉದ್ಯಮ ಹೊಂದಿದ್ದಾರೆ. ಈ ಬಗ್ಗೆ ಯಾರೋ ಒಬ್ಬರು ನನಗೆ ಮಾಹಿತಿ ನೀಡಿದ್ದಾರೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿರುವ ಈ ಶಾಸಕರನ್ನು ಆಯ್ಕೆ ಮಾಡಿದ್ದು ಜನರೇ ಅಲ್ಲವೇ? ಹೀಗಾಗಿ ಈ ಸಲ ಮತ ಚಲಾಯಿಸುವಾಗ ಹುಷಾರಾಗಿರಿ. ಸರಿಯಾಗಿ ಯೋಚಿಸಿ ಮತ ಹಾಕಿ. ರಾಜಕೀಯದಲ್ಲಿ ಹಣವಂತರಿಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುವವರಿಗೆ ಟಿಕೆಟ್ ಸಿಗುತ್ತಿದೆ. ಶಾಸಕ ಸ್ಥಾನಕ್ಕೆ ಸ್ಪರ್ಧಿಸಿರುವವರು 40 ಲಕ್ಷ ಹಣ ಖರ್ಚು ಮಾಡಲು ಅವಕಾಶ ಇದೆ. ಆದರೆ ಒಬ್ಬೊಬ್ಬರು ಕೋಟಿ ಕೋಟಿ ಖರ್ಚು ಮಾಡಿ ಶಾಸಕರಾಗುತ್ತಿದ್ದಾರೆ ಎಂದು ಮಾಜಿ ಸಂಸದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
07/09/2022 08:29 am