ನವದೆಹಲಿ: ಕೇಜ್ರಿವಾಲ್ ನೇತೃತ್ವದ ಸರ್ಕಾರ ದೆಹಲಿಯಲ್ಲಿ ನೂತನ ಅಬಕಾರಿ ನೀತಿಯನ್ನು ಜಾರಿ ಮಾಡಿದೆ. ಇದರ ಅನ್ವಯ ಅಕ್ಟೋಬರ್ 1ರಿಂದ ಖಾಸಗಿ ಲಿಕ್ಕರ್ ಶಾಪ್‍ಗಳನ್ನು ತೆರೆಯುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಕ್ಟೋಬರ್ 1ರಿಂದ 45 ದಿನಗಳ ಕಾಲ ಖಾಸಗಿ ಲಿಕ್ಕರ್ ಶಾಪ್, ಬಾರ್‌ಗಳನ್ನು ಮುಚ್ಚಲಾಗುವುದು. ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯ ಅನುಸಾರ ಅಕ್ಟೋಬರ್ 1ರಿಂದ ಖಾಸಗಿ ಲಿಕ್ಕರ್ ಶಾಪ್‍ಗಳನ್ನು ತೆರೆಯುವಂತಿಲ್ಲ. ಅ.1ರಿಂದ ನವೆಂಬರ್ 17ರವರೆಗೆ ದೆಹಲಿಯಲ್ಲಿ ಲಿಕ್ಕರ್ ಅಥವಾ ಆಲ್ಕೋಹಾಲ್ ಮಾರಾಟ ಮಾಡುವಂತಿಲ್ಲ.
ಖಾಸಗಿ ಲಿಕ್ಕರ್ ಶಾಪ್‍ಗಳು ಹೊಸತಾಗಿ ಆಲ್ಕೋಹಾಲ್ ಸ್ಟಾಕ್ ಮಾಡುತ್ತಿಲ್ಲ, ಇದರಿಂದ ಈಗಾಗಲೇ ಕೆಲವು ಬಾರ್ ಹಾಗೂ ಲಿಕ್ಕರ್ ಶಾಪ್‍ಗಳಲ್ಲಿ ಆಲ್ಕೋಹಾಲ್ ಅಭಾವ ಕಂಡುಬರುತ್ತಿದೆ. ಖಾಸಗಿ ಲಿಕ್ಕರ್ ಶಾಪ್‍ಗಳಲ್ಲಿ ಬಹುತೇಕ ಅಂಗಡಿಗಳು ಶಾಶ್ವತವಾಗಿಯೇ ಮುಚ್ಚಲಿವೆ. ಸದ್ಯಕ್ಕೆ ದೆಹಲಿಯಲ್ಲಿ 849 ಮದ್ಯದಂಗಡಿಗಳಿವೆ. ಅವುಗಳಲ್ಲಿ 276 ಖಾಸಗಿಯಾಗಿ ಲಿಕ್ಕರ್ ಶಾಪ್‍ಗಳಾಗಿವೆ. ಬಾಕಿ ಮದ್ಯದಂಗಡಿಗಳನ್ನು ದೆಹಲಿ ಸರ್ಕಾರದ ಏಜೆನ್ಸಿಗಳು ನಡೆಸುತ್ತವೆ.
PublicNext
28/09/2021 07:53 am