ನವದೆಹಲಿ: ಆರು ತಿಂಗಳು ತಡವಾಗಿದೆ, ಆದರೆ ಈಗ ರಾಜ್ಯ ಸರ್ಕಾರಗಳು ತೈಲ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು
ಆರ್ಥಿಕ ನಿರ್ಧಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೋವಿಡ್ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ಇಂದು ಎಲ್ಲಾ ರಾಜ್ಯದ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ.
ಇದೇ ವೇಳೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಂಬಂಧ ಮಾತನಾಡಿದ ಅವರು, ಕೇಂದ್ರವು ಕಳೆದ ನವೆಂಬರ್ ನಲ್ಲಿ ಇಂಧನ ಬೆಲೆ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿ, ತೆರಿಗೆ ಇಳಿಸಲು ರಾಜ್ಯಗಳಿಗೆ ಮನವಿ ಮಾಡಿತ್ತು. ಆಗ ಕೆಲವು ರಾಜ್ಯಗಳು ಕೇಂದ್ರದ ಮಾತಿಗೆ ಮಣಿದು ಜನರಿಗೆ ಪರಿಹಾರ ನೀಡಿದರೆ, ಕೆಲವು ರಾಜ್ಯಗಳು ಹಾಗೆ ಮಾಡಲಿಲ್ಲ ಎಂದು ಬಿಜೆಪಿಯೇತರ ರಾಜ್ಯಗಳಿಗೆ ಚಾಟಿ ಬೀಸಿದ್ದಾರೆ.
ಈಗಾಗಲೇ ಆರು ತಿಂಗಳು ತಡವಾಗಿದೆ, ಆದರೆ ಈಗ ರಾಜ್ಯ ಸರ್ಕಾರಗಳು ತೈಲ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಹೇಳಿದರು. ಪ್ರಧಾನಿ ಮೋದಿಯವರ ಈ ಸಭೆಯು ಕೊರೋನಾ ವೈರಸ್ ಬಗ್ಗೆಯೇ ಆಗಿತ್ತಾದರೂ, ಇಲ್ಲಿ ತೈಲ ಬೆಲೆ ಏರಿಕೆಯ ಪ್ರಸ್ತಾಪವೂ ಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಿ ಎಂದು ಮೋದಿ ಹೇಳಿದರು.
ಕೊರೊನಾ ನಾಲ್ಕನೇ ಅಲೆಯ ಭೀತಿಯ ನಡುವೆ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನಡೆಸಿದ ಮೊದಲ ಸಭೆ ಇದಾಗಿದೆ.
PublicNext
27/04/2022 03:26 pm