ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಚ್‌ಡಿಕೆ ಹೋಟೆಲ್‌ನಲ್ಲಿ ಉಳಿಯಲು ನೀವೇ ಕಾರಣ: ಸಾ.ರಾ.ಮಹೇಶ್ ತಿರುಗೇಟು​

ಮೈಸೂರು: ಜೆಡಿಎಸ್ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಹೋಟೆಲ್‌ನಲ್ಲಿ ಉಳಿಯಲು ನೀವೇ ಕಾರಣ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಅವರು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ''ನೀವು ಸಿಎಂ ಅಧಿಕೃತ ನಿವಾಸವನ್ನು ಖಾಲಿ ಮಾಡದ ಪರಿಣಾಮ ಎಚ್‌.ಡಿ.ಕುಮಾರಸ್ವಾಮಿ ಅವರು ಹೋಟೆಲ್‌ಗೆ ಹೋಗಬೇಕಾಯ್ತು. ಅವರ ಜೆ.ಪಿ. ನಗರದ ಮನೆ ದೂರವಾಗಿತ್ತು. ಹಾಗಾಗಿ ಹೋಟೆಲ್​ಗೆ ಹೋದರು. ಆದರೆ ಕುಮಾರಸ್ವಾಮಿ ವಿಧಾನಸೌಧಕ್ಕೆ ಬರುತ್ತಿರಲಿಲ್ಲವಾ? ವಿಶ್ರಾಂತಿ ಪಡೆಯಲು ಹೋಟೆಲ್‌ಗೆ ಹೋಗಿದ್ದು ತಪ್ಪಾ? ನೀವು ಯಾರೂ ಹೋಟೆಲ್‌ನಲ್ಲಿ ವಾಸ ಮಾಡಿಲ್ವಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರೇ ಭಾಷೆಯ ಮೇಲೆ ಹಿಡಿತ ಇರಬೇಕು. ಏಕವಚನದಲ್ಲಿ ನೀವು ಮಾತನಾಡಿದರೆ ಬೇರೆಯವರು ಹಾಗೆ ಮಾಡುತ್ತಾರೆ ಎಂದು ಕಿಡಿಕಾರಿದರು.

Edited By : Vijay Kumar
PublicNext

PublicNext

19/12/2020 10:21 pm

Cinque Terre

67.36 K

Cinque Terre

2

ಸಂಬಂಧಿತ ಸುದ್ದಿ