ಮೈಸೂರು: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ವಿಧಾನಸಭೆ ವಿಪಕ್ಷ ನಾಯನ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರ್ಕಾವತಿ ಕೇಸ್‌ನಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು. ಅದಕ್ಕಾಗಿಯೇ ಲೋಕಾಯುಕ್ತವನ್ನು ಸ್ಕ್ರ್ಯಾಪ್ ಮಾಡಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯನ್ನು ತಂದಿದ್ದರು. ಅರ್ಕಾವತಿ ಕೇಸ್ ತೆರೆದರೆ ನೀವು ಎಲ್ಲಿರುತ್ತೀರೆಂದು ತಿಳಿಯುತ್ತೆ ಎಂದು ಕುಟುಕಿದರು.
ಉಪ ಚುನಾವಣೆಯಲ್ಲಿ ಸೋಲಿನ ವಿಚಾರವಾಗಿ ಕಿಡಿಕಾರಿದ ಅವರು, ''ನೀವೇಕೆ ಸೋತಿದ್ದು ಅಂತ ಆತ್ಮಾವಲೋಕನ ಮಾಡಿಕೊಳ್ಳಲ್ಲ? ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿಬಿಟ್ಟರು. ಬಲಗೈನವರು ಮತ ಹಾಕಿಲ್ಲ ಎನ್ನುವ ಹೇಳಿಕೆ ವಿಚಾರವಾಗಿ ರಾಜ್ಯದಾದ್ಯಂತ ಕಾಂಗ್ರೆಸ್ ಕಾಪಾಡಿದ್ದು ದಲಿತ ಸಮುದಾಯ. ಆತ್ಮಾವಲೋಕನ ಮಾಡಿಕೊಳ್ಳದೆ ಮಾತನಾಡಿಕೊಳ್ಳಬಾರದು'' ಎಂದು ಹೇಳಿದರು.
ಸದಾ ಬೇರೆಯವರ ಬೆನ್ನಿಗೆ ಚೂರಿ ಇರಿದು ಆನಂದ ಪಡುತ್ತಿದ್ದರು. ವಿಘ್ನ ಸಂತೋಷಿಗಳಾಗಿದ್ದವರಿಗೆ ಈಗ ನೋವಾಗುತ್ತಿದೆ. ನಿಮ್ಮದು ಮಾತ್ರ ರಕ್ತ ಮಾಂಸ ಮೂಳೆ. ನಮ್ಮದು ತಗಡು ಅಥವಾ ಮರಾನಾ? ನೀವು ಚೂರಿ ಇರಿಯುವಾಗ ಅದನ್ನು ಗಮನಿಸಲೂ ಇಲ್ಲ. ನಾವು ಎಂತಹ ನೋವು ಅನುಭವಿಸಿದೆವು ಗೊತ್ತಿದೆಯಾ ಎಂದು ಪ್ರಶ್ನಿಸಿ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದರು.
PublicNext
19/12/2020 03:27 pm