ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಚಾಲನೆ ಕೊಟ್ಟಾಗಿನಿಂದ ಅಲ್ಲಿನ ಮುಂಚೂಣಿ ಪಕ್ಷಗಳು ಅದರೆ ಶ್ರೇಯಸ್ಸಿನ ಪಾಲು ಪಡೆಯಲು ಹವಣಿಸುತ್ತಿವೆ. ಇದಕ್ಕೆ ಸಮಾಜವಾದಿ ಪಕ್ಷ ಹೊರತಾಗಿಲ್ಲ. ಅಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಇದೀಗ ರಾಮಭಕ್ತ ಪಕ್ಷಗಳಾಗಿ ಬದಲಾಗಿವೆ. ನಿನ್ನೆ ಉತ್ತರಪ್ರದೇಶದ ಅಜಂಘರ್ನಿಂದ ತೆರಳುವ ವೇಳೆ ವಿರಾಮಕ್ಕೆಂದು ಆಯೋಧ್ಯೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, "ಶ್ರೀರಾಮಚಂದ್ರ ಸಮಾಜವಾದಿ ಪಕ್ಷಕ್ಕೆ ಸೇರಿದವರು, ನಾವು ರಾಮನ ಭಕ್ತರು" ಎಂದು ಹೇಳುವ ಮೂಲಕ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ.
ಅಯೋಧ್ಯೆಗೆ ಭೇಟಿ ನೀಡಿರುವ ವೇಳೆ ಸಣ್ಣ ಮಟ್ಟದ ಪತ್ರಿಕಾಗೋಷ್ಠಿ ಮಾತನಾಡಿರುವ ಅಖಿಲೇಶ್ ಯಾದವ್, "ತಾನು ತಮ್ಮ ಸರ್ಕಾರದ ಅವಧಿಯಲ್ಲಿ ರಾಮ ದೇವಾಲಯದ ಅಭಿವೃದ್ಧಿಗಾಗಿ ಮಾಡಿದ ವಿವಿಧ ಕೆಲಸಗಳನ್ನು ತಿಳಿಸಿರುವ ಅಖಿಲೇಶ್, ತಮ್ಮ ಅವಧಿಯಲ್ಲಿಯೇ ಅಯೋಧ್ಯೆಯ ಸುತ್ತಲಿನ ರಿಂಗ್ ರಸ್ತೆಯಲ್ಲಿ ಪಾರಿಜಾತ ಮರಗಳ ತೋಟವನ್ನು ಮಾಡಲಾಗಿತ್ತು. ಮತ್ತು ಈ ರಸ್ತೆಯ ಉದ್ದಕ್ಕೂ ಧಾರ್ಮಿಕ ಪ್ರಾಮುಖ್ಯತೆಯೊಂದಿಗೆ ವಿವಿಧ ಜಾತಿಯ ಮರಗಳನ್ನು ನೆಡಲಾಗಿತ್ತು" ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
PublicNext
16/12/2020 11:26 am