ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೇಲ್ಮನೆ (ವಿಧಾನ ಪರಿಷತ್)ನಲ್ಲಿ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಇಂತಹ ಗೂಂಡಾಗಿರಿಯನ್ನು ಹಿಂದೆಂದೂ ನೋಡಿಲ್ಲ. ಬಿಜೆಪಿಯವರ ಗೂಂಡಾ ವರ್ತನೆಗೆ ಜೆಡಿಎಸ್ ಕೂಡ ಕಾರಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಭಾಪತಿ ಅವರನ್ನು ಸದನದ ಒಳಗಡೆ ಬರದಂತೆ ಬಾಗಿಲು ಹಾಕಿ ತಡೆದಿರುವುದು ಕಾನೂನು ಬಾಹಿರ. ಸಭಾಪತಿ ಇದ್ದಾಗ ಉಪಸಭಾಪತಿ ಸದನದ ಅಧ್ಯಕ್ಷರ ಸ್ಥಾನದಲ್ಲಿ ಕೂರುವಂತಿಲ್ಲ. ಸಭಾಪತಿಗಳಿಗೆ ಏನಾದರೂ ಸಮಸ್ಯೆ ಇದ್ದಾಗ, ಇಲ್ಲವೇ ಸಭಾಪತಿ ಹೇಳಿದಾಗ ಮಾತ್ರ ಉಪಸಭಾಪತಿ ಪೀಠದಲ್ಲಿ ಕೂತು ಕಲಾಪ ನಡೆಸಬೇಕು ಎಂದು ತಿಳಿಸಿದರು.
ಸಭಾಪತಿಗಳಿದ್ದಾಗಲೂ ಉಪಸಭಾಪತಿಗಳನ್ನು ಪೀಠದಲ್ಲಿ ಕೂರಿಸಿದ್ದು ಸಂವಿಧಾನ, ಪ್ರಜಾಪ್ರಭುತ್ವ, ಕಾನೂನು ಬಾಹಿರ ನಡೆಯಾಗಿದೆ. ಬಿಜೆಪಿಯವರು ಕಲಾಪದ ನಿಯಮಗಳನ್ನು ಪಾಲಿಸುತ್ತಿಲ್ಲ. ಇದನ್ನು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.
PublicNext
15/12/2020 08:42 pm