ಬೆಂಗಳೂರು: ವಿಧಾನಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಮಂಗಳವಾರದ ವಿಶೇಷ ಅಧಿವೇಶನ ಅಗ್ನಿ ಪರೀಕ್ಷೆಯಾಗಿದೆ. ಹೇಗಾದರೂ ಮಾಡಿ ಪದಚ್ಯುತಗೊಳಿಸಲೇ ಬೇಕು ಎಂದು ಮುಂದಾಗಿರುವ ಆಡಳಿತರೂಢ ಬಿಜೆಪಿ ಹಲವು ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಸಭಾಪತಿಗಳ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮುಂದಾಗಿದೆ.
ಈ ಎಲ್ಲ ಕಾರಣದಿಂದ ಮಂಗಳವಾರದ ವಿಶೇಷ ಅಧಿವೇಶನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ತನ್ನ ಎಲ್ಲ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದು ಪರಿಷತ್ ಸದಸ್ಯರ ಜೊತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 10.30 ಕ್ಕೆ ವಿಧಾನಸೌಧದಲ್ಲಿ ಸಭೆ ಕರೆದಿದ್ದಾರೆ. ನಡುವೆ ಬಿಜೆಪಿಯ ಪ್ರಯತ್ನಕ್ಕೆ ಅಡ್ಡಗಾಲು ಹಾಕಲು ಕಾಂಗ್ರೆಸ್ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ ಎನ್ನಲಾಗಿದೆ. ಆದರೆ ಈ ವಿಚಾರದಲ್ಲಿ ಜೆಡಿಎಸ್ ನಡೆ ಏನು ಎನ್ನುವುದು ಈಗಲೂ ಕುತೂಹಲವಾಗಿಯೇ ಉಳಿದಿದೆ.
PublicNext
15/12/2020 10:22 am