ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇದೇನು ಪ್ರತಿಭಟನೆಯೋ ಅಥವಾ ಪಿಕ್‌ನಿಕ್ಕೋ?- ನೆಟ್ಟಿಗರಿಂದ ಟ್ರೋಲ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸುತ್ತಿರುವ ರೈತರ ಪ್ರತಿಭಟನಾ ಸ್ಥಳದ ಜೀವನ ಭಿನ್ನವಾಗಿದೆ. ಹೀಗಾಗಿ ಕೆಲ ನೆಟ್ಟಿಗರು, 'ಇದೇನು ಪ್ರತಿಭಟನೆಯೋ ಅಥವಾ ಪಿಕ್‌ನಿಕ್ಕೋ ಎಂದು ಪ್ರಶ್ನಿಸಿ ಟ್ರೋಲ್ ಮಾಡುತ್ತಿದ್ದಾರೆ.

ದೆಹಲಿ ಗಡಿಯಲ್ಲಿ ಹರಿಯಾಣ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಸಾವಿರಾರು ರೈತರು ಹೊಸ ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತರ ಜೀವನ ಶೈಲಿ ಹೇಗಿದೆ ಗೊತ್ತಾ? ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ದೆಹಲಿಯ ಭಾರೀ ಚಳಿ ಮಧ್ಯೆ ಕಷ್ಟಪಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ ರೈತರು. ಪ್ರತಿಭಟನಾನಿರತ ರೈತರಿಗೆ ಅನೇಕರು ತಮ್ಮಿಂದ ಸಾಧ್ಯವಾದ ಸಹಾಯ ಮಾಡಿದ್ದಾರೆ. ಕೆಲವರು ಹಾಸಿಗೆ ಸೇರಿದಂತೆ ಉಡುಪುಗಳನ್ನು ನೀಡಿದರೆ ಕೆಲವರು ಆಹಾರ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರೇ ಭಾಗಿಯಾಗಿರುವುದರಿಂದ ಅವರಿಗೆ ಆರೋಗ್ಯ ಸಮಸ್ಯೆಯಾಗದಂತೆ ಅಂತಾರಾಷ್ಟ್ರೀಯ ಎನ್‌ಜಿಒ ಖಲ್ಸಾ ಫೂಟ್ ಮಸಾಜರ್ ಕೂಡಾ ಅಳವಡಿಸಿದೆ. ಸುಮಾರು 25 ಮೆಷಿನ್‌ಗಳನ್ನು ಅಳವಡಿಸಲಾಗಿದ್ದು, 10 ನಿಮಿಷ ರೈತರಿಗೆ ಫೂಟ್ ಮಸಾಜ್ ಸೇವೆಯೂ ಇದೆ.

ಪ್ರತಿಭಟನೆ ಜಾಗದಲ್ಲಿ ಟೀ, ಸ್ನ್ಯಾಕ್ಸ್ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ಬೋಪಾಲನ್ ಗ್ರಾಮದ ಭಾರತೀಯ ಕಿಸಾನ್ ಯೂನಿಯನ್ ಪಿಝಾ ಹಂಚಿತ್ತು. ಬಹಳಷ್ಟು ಜನರು ರೈತರಿಗೆ ನೆರವಾಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಟೀಕೆ ವ್ಯಕ್ತಪಡಿಸಿದ್ದಾರೆ. ನಿಜವಾದ ರೈತರು ಗದ್ದೆಯಲ್ಲಿ ಕೆಲಸ ಮಾಡುತ್ತಾರೆ. ಇವರು ಸುಮ್ಮನೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

Edited By : Vijay Kumar
PublicNext

PublicNext

13/12/2020 05:46 pm

Cinque Terre

64.49 K

Cinque Terre

3

ಸಂಬಂಧಿತ ಸುದ್ದಿ