ನವದೆಹಲಿ: ನೂತನ ಕೃಷಿ ಕಾಯ್ದೆಯಿಂದ ಹೊಸ ಮಾರುಕಟ್ಟೆ ಸೃಷ್ಟಿಯಾಗಲಿದ್ದು, ರೈತರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ವಾಣಿಜ್ಯ ಮತ್ತು ಉದ್ಯಮ ಒಕ್ಕೂಟ (ಎಫ್ಐಸಿಸಿಐ)ದ 93ನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಹಲವು ವಿಷಯಗಳು ವೇಗವಾಗಿ ಬದಲಾಗುತ್ತಿರುತ್ತದೆ. ಆದರೆ 2020ನೇ ವರ್ಷ ಹಲವರ ಕನಸನ್ನು ನುಚ್ಚುನೂರು ಮಾಡಿತು. ಜೀವನದಲ್ಲಿ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿತು. ನಮ್ಮ ದೇಶ ಸೇರಿದಂತೆ ಇಡೀ ವಿಶ್ವ ಸಾಕಷ್ಟು ಏರಿಳಿತಗಳನ್ನು ಕಂಡಿತು. ಇನ್ನು ಕೆಲ ವರ್ಷಗಳು ಕಳೆದ ನಂತರ ಕೊರೊನಾ ಬಗ್ಗೆ ಯೋಚಿಸಿದರೆ ನಾವು ನಂಬಲೂ ಸಾಧ್ಯವಿಲ್ಲ. ಪರಿಸ್ಥಿತಿ ಇದೀಗ ಸುಧಾರಿಸುತ್ತಿದೆ ಎಂದು ಹೇಳಿದರು.
ದೇಶದ ರೈತರು ತಮ್ಮ ಬೆಳೆ ಉತ್ಪನ್ನಗಳನ್ನ ಎಪಿಎಂಸಿಯಲ್ಲೂ ಮಾರಬಹುದು. ಇಲ್ಲವೆ ಹೊರಗೂ ಮಾರಬಹುದು. ಹಾಗೆಯೇ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲೂ ಅವರು ಮಾರಾಟ ಮಾಡಬಹುದು. ರೈತರ ಆದಾಯವನ್ನು ಹೆಚ್ಚಿಸಿ ಅವರಿಗೆ ಆರ್ಥಿಕ ಅನುಕೂಲತೆಗಳನ್ನ ಕಲ್ಪಿಸಲು ಈ ಕ್ರಮಗಳನ್ನ ನಾವು ತೆಗೆದುಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.
PublicNext
12/12/2020 02:45 pm