ಗುಂಟೂರು: ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕಾಜಾ ಟೋಲ್ ಪ್ಲಾಜಾ ಬಳಿ ಆಂಧ್ರದ ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್ ಆರ್ ಸಿಪಿ)ದ ನಾಯಕಿ ಪ್ಲಾಜಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಕಾರಿನಲ್ಲಿ ತೆರಳುತ್ತಿದ್ದ ನಾಯಕಿ ಟೋಲ್ ಗೇಟ್ ಬಳಿ ಟೋಲ್ ತೆರಿಗೆ ಹಣ ಪಾವತಿಸಲು ನಿರಾಕರಿಸುತ್ತಾರೆ ಈ ವೇಳೆ ಟೋಲ್ ಸಿಬ್ಬಂದಿ ಬ್ಯಾರಿಕೇಟ್ ಹಾಕಿ ಕಾರನ್ನು ತಡೆದಿದ್ದಾರೆ.
ಆ ವೇಳೆ ಗರಂ ಆದ ರೇವತಿ ಕಾರಿನಿಂದ ಇಳಿದು ತಗಾದೆ ಮಾಡುತ್ತಾ ಬ್ಯಾರಿಕೇಡ್ ತೆಗೆದು ಟೋಲ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ನಾಯಕಿ ದರ್ಪದಿಂದ ಕಪಾಳ ಮೋಕ್ಷ ಮಾಡಿರುವ ವಿಡಿಯೋ ವೈರಸ್ ಆಗಿದೆ.
PublicNext
10/12/2020 01:05 pm