ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಡ್‌ ನ್ಯೂಸ್: 35 ಲಕ್ಷ ರೂ.ವರೆಗಿನ ಫ್ಲ್ಯಾಟ್ ಖರೀದಿ ಮುದ್ರಾಂಕ ಶುಲ್ಕ ಶೇ.2-3ರಷ್ಟು ಇಳಿಕೆ

ಬೆಂಗಳೂರು: ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಾಗೂ ಬಡವರು ಫ್ಲ್ಯಾಟ್ ಖರೀದಿಸಲು ಮುದ್ರಾಂಕ ಶುಲ್ಕ ವಿನಾಯಿತಿ ನೀಡುವ ಕರ್ನಾಟಕ ಮುದ್ರಾಂಕ ಶುಲ್ಕ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ದೊರೆಯಿತು.

ಕಂದಾಯ ಸಚಿವ ಆರ್. ಅಶೋಕ್ ವಿಧೇಯಕ ಮಂಡಿಸಿ, 'ಬಡವರು ಅಪಾರ್ಟ್‌ಮೆಂಟ್ ಖರೀದಿಸಲು ಮೊದಲ ನೋಂದಣಿಗೆ ಮಾತ್ರ ಇದು ಅನ್ವಯವಾಗಲಿದೆ. 20 ಲಕ್ಷ ರೂ.ವರೆಗಿನ ಮೌಲ್ಯದ ಫ್ಲ್ಯಾಟ್‌ಗಳಿಗೆ ಶೇ.5 ರಿಂದ 2ಕ್ಕೆ ಮತ್ತು 20ರಿಂದ 35 ಲಕ್ಷ ಮೌಲ್ಯದ ಫ್ಲ್ಯಾಟ್ ಖರೀದಿಗೆ ಶೇ. 5ರಿಂದ ಶೇ. 3ಕ್ಕೆ ಮುದ್ರಾಂಕ ಶುಲ್ಕ ಇಳಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಕೈಗಾರಿಕೆ ಉತ್ತೇಜನಕ್ಕೆ ಮುದ್ರಾಂಕ ಶುಲ್ಕ ವಿನಾಯಿತಿ ಕೊಡುವುದು ಹಾಗೂ ಯಾರು ಬಡವರಿದ್ದಾರೆ ಅವರಿಗೆ 20 ಲಕ್ಷ ರೂ.ಗಳಿಂದ 35 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲ್ಯಾಟ್ ಖರೀದಿಗೆ ಶೇ.5 ರಿಂದ ಶೇ. 3ಕ್ಕೆ ಮುದ್ರಾಂಕ ಶುಲ್ಕ ಕಡಿಮೆ ಮಾಡಿದೆ. ಬಡವರು ಕೂಡ ಫ್ಲ್ಯಾಟ್ ತೆಗೆದುಕೊಳ್ಳಬೇಕೆಂಬುದು ಇದರ ಹಿಂದಿನ ಉದ್ದೇಶ ಎಂದರು. ಕೊನೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಹಲವು ಸದಸ್ಯರು ನೀಡಿದ ಸಲಹೆಗಳನ್ನು ಪರಿಗಣಿಸದೇ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು.

Edited By : Vijay Kumar
PublicNext

PublicNext

09/12/2020 11:15 pm

Cinque Terre

40.86 K

Cinque Terre

0

ಸಂಬಂಧಿತ ಸುದ್ದಿ