ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೋಡೆತ್ತು ಎಂಬ ಖ್ಯಾತಿ ಪಡೆದಿದ್ದ ನಾಯಕರು ಇಂದು ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಸದ್ಯ ಎಚ್‌ಡಿಕೆ ಚಾಲೆಂಜ್‌ಗೆ ಡಿ.ಕೆ.ಶಿವಕುಮಾರ್ ರಾಜಕೀಯ ನಿವೃತ್ತಿ ಮಾತು ಆಡಿದ್ದಾರೆ.
ನಾನು ಹಗಲು ಹೋಗಿ ಬಿಎಸ್‍ವೈ ಅವರನ್ನು ಭೇಟಿಯಾಗಿ ಬರುತ್ತೇನೆ. ಇವರಂತೆ ಮಧ್ಯರಾತ್ರಿ ಹೋಗಿಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ''ನಾನು ಏನಾದರೂ ಒಂದು ದಿನ ಸಿಎಂ ಯಡಿಯೂರಪ್ಪನವರನ್ನಾಗಲಿ ಅಥವಾ ಈ ಸರ್ಕಾರದಲ್ಲಿರುವ ಯಾವುದೇ ಮಂತ್ರಿಗಳನ್ನಾಗಲಿ ಮಧ್ಯರಾತ್ರಿ ಭೇಟಿಯಾಗಿ ಕೆಲಸ ಮಾಡಿಸಿಕೊಂಡಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೆ ಕುಮಾರಸ್ವಾಮಿ ದಾಖಲೆ ಸಮೇತ ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ'' ಎಂದು ಸವಾಲು ಹಾಕಿದ್ದಾರೆ.
ನನ್ನನ್ನ ನೀವು 30 ವರ್ಷಗಳಿಂದ ನೋಡಿದ್ದೀರಾ. ನನ್ನ ಹೋರಾಟ ಏನು ಅಂತಾ ನಿಮಗೆ ಗೊತ್ತು. ನೀವು ಸಿಎಂ ಆಗಿದ್ದಾಗ ನಿಮ್ಮ ಕೆಳಗೆ ಕೆಲಸ ಮಾಡಿದ್ದು, ನಿಮಗೆ ಗೌರವ ಕೋಡುತ್ತೇವೆ. ನಿಮಗೆ ರಾಜಕೀಯ ಸಮಸ್ಯೆಗಳಿರಬಹುದು. ಆದರೆ ನನಗೆ ಅಂತಹ ಸಮಸ್ಯೆಗಳಿಲ್ಲ ಎಂದು ಟಾಂಗ್ ಕೊಟ್ಟರು.
PublicNext
09/12/2020 08:33 pm