ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕ ಸುನೀಲ್ ಕುಮಾರ್, ಅರುಣ್ ಸಿಂಗ್ ಭೇಟಿ: 20 ನಿಮಿಷ ಚರ್ಚೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯದ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಭೋಜನ ಮುಗಿಸಿ ತೆರಳಿದ್ದಾರೆ. ಹಾಗೆ ಹೋಗುವ ಮುನ್ನ ಸಿಎಂ ಸಂಪುಟ ವಿಸ್ತರಣೆಯ ಹೊಣೆಯನ್ನೂ ಯಡಿಯೂರಪ್ಪನವರ ಹೆಗಲಿಗೇ ವಹಿಸಿದ್ದಾರೆ.

ಆದರೆ ಈ ಮಧ್ಯೆ ಅರುಣ್ ಸಿಂಗ್​ ಇಂದು ಶಾಸಕ ಸುನೀಲ್ ಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ, 20 ನಿಮಿಷ ಮಾತನಾಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ವಿಧಾನಸಭೆ ಮುಖ್ಯಸಚೇತಕ ಸುನೀಲ್​ ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್ ಕಟೀಲ್​ಗೆ ಪತ್ರ ಬರೆದು, ಪಕ್ಷದ ಕೆಲವು ಆಂತರಿಕ ವಿಚಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಪತ್ರದ ವಿಚಾರ ಅರುಣ್​ ಸಿಂಗ್ ಗಮನಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕಚೇರಿಯಲ್ಲಿ ಭೇಟಿಯಾಗುವಂತೆ ಸುನೀಲ್​ಗೆ ತಿಳಿಸಿದ್ದರು. ಅದರಂತೆ ಇಂದು ಭೇಟಿಯಾದ ಶಾಸಕ ಸುನೀಲ್ ಕುಮಾರ್​ರೊಂದಿಗೆ 20 ನಿಮಿಷ ಚರ್ಚೆ ನಡೆಸಿದ್ದಾರೆ. ಅದಾದ ಬೆನ್ನಲ್ಲೇ ಸಚಿವರು, ಸಂಸದರು, ಶಾಸಕರೊಂದಿಗೆ ಅರುಣ್​ ಸಿಂಗ್ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಈ ಹಂತದ ಮಾತುಕತೆಯೀಗ ಸಿಕ್ಕಾಪಟೆ ಕುತೂಹಲ ಮೂಡಿಸಿದೆ. ಪಕ್ಷದ ಆಂತರಿಕ ಸಮಸ್ಯೆಗಳನ್ನೆಲ್ಲ ಸುನೀಲ್ ಅರುಣ್​ಸಿಂಗ್ ಎದುರು ಹೇಳಿದ್ದಾರಾ ಎಂಬ ಪ್ರಶ್ನೆಯೂ ಎದ್ದಿದೆ.

Edited By : Nagaraj Tulugeri
PublicNext

PublicNext

06/12/2020 08:13 pm

Cinque Terre

161.62 K

Cinque Terre

1

ಸಂಬಂಧಿತ ಸುದ್ದಿ