ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಹಂಕಾರ ಬಿಡಿ ಅನ್ನದಾತನಿಗೆ ನ್ಯಾಯ ಕೊಡಿ : ಪ್ರಧಾನಿಗೆ ರಾಹುಲ್ ಟಿಪ್ಸ್

ನವದೆಹಲಿ : ದೇಶದ ಬೆನ್ನೆಲುಬು ರೈತ ಅವರ ಅಳಲನ್ನು ಆಲಿಸುವುದು ಸರ್ಕಾರದ ಕೆಲಸ ಎಂದು ರಾಗಾ ಮೋದಿಗೆ ಸಲಹೆ ನೀಡಿದ್ದಾರೆ.

ಕೇಂದ್ರದ ಹೊಸ ಕೃಷಿ-ಮಾರುಕಟ್ಟೆ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಮೂಲದ ರೈತರು ರಾಷ್ಟ್ರ ರಾಜಧಾನಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಸಂದರ್ಭವನ್ನು ತಿಳಿಸಲು ಮುಂದಾದ ರಾಹುಲ್ ಗಾಂಧಿ ಅಹಂಕಾರ ಬಿಟ್ಟು ಎದ್ದೇಳಿ, ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅವರ ಹಕ್ಕುಗಳನ್ನು ನೀಡಿ ಎಂದು ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ರೈತರ ಶ್ರಮಕ್ಕೆ ಎಲ್ಲರೂ ಆಭಾರಿಯಾಗಿದ್ದಾರೆ, ಹೀಗಾಗಿ ಅವರಿಗೆ ನ್ಯಾಯ ಒದಗಿಸುವ ಮೂಲಕ ನಾವು ಅವರು ಋಣ ತೀರಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಅನ್ನದಾತರು ರಸ್ತೆಯಲ್ಲಿ ಕುಳಿತಿದ್ದರೇ ಟಿವಿಯಲ್ಲಿ ಭಾಷಣಗಳು ಬರುತ್ತಿವೆ, ಶ್ರಮಜೀವಿಗಳ ಋಣದಲ್ಲಿದ್ದೇವೆ, ಅವರಿಗೆ ನ್ಯಾಯ ಒದಗಿಸುವ ಮೂಲಕ ಅವರ ಋಣ ತೀರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಕುರ್ಚಿ ಬಿಟ್ಟು ಎದ್ದೇಳಿ, ರೈತರ ಮೇಲೆ ಟಿಯರ್ ಗ್ಯಾಸ್ ಮತ್ತು ಅವರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಬಿಡಿ ಎಂದು ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Edited By : Nirmala Aralikatti
PublicNext

PublicNext

01/12/2020 12:35 pm

Cinque Terre

63.16 K

Cinque Terre

14

ಸಂಬಂಧಿತ ಸುದ್ದಿ