ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಬಿಐ ಕಚೇರಿಗೆ ಡಿಕೆಶಿ ಹಾಜರ್ : ವಿಚಾರಣೆಯಿಂದ ವಿನಾಯಿತಿ

ಬೆಂಗಳೂರು: ಸಿಬಿಐ ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಇಂದು ವಿಚಾರಣೆ ಎದುರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿಬಿಐ ಕಚೇರಿಗೆ ಆಗಮಿಸಿದರು.

ಈ ವೇಳೆ ಸಿಬಿಐ ಡಿಕೆಶಿ ಗೆ ವಿಚಾರಣೆಯಿಂದ ವಿನಾಯಿತಿ ನೀಡಿದೆ. ಇಂದು ಸಂಜೆ 3.55ಕ್ಕೆ ಸಿಬಿಐ ಕಚೇರಿಗೆ ಡಿಕೆ ಶಿವಕುಮಾರ್ ಹಾಜರಾದರು.

ಈ ವೇಳೆ ಡಿಕೆಶಿ ಕಾಂಗ್ರೆಸ್ ಹಿರಿಯ ಮುಖಂಡ ಅಹಮದ್ ಪಟೇಲ್ ಅಂತ್ಯಸಂಸ್ಕಾರಕ್ಕೆ ತೆರಳಬೇಕು. ಹೀಗಾಗಿ ವಿಚಾರಣೆಯಿಂದ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು.

ಸಿಬಿಐ ಅಧಿಕಾರಿಗಳು ಡಿಕೆಶಿ ಮನವಿಯನ್ನು ಪುರಸ್ಕರಿಸಿ ವಿಚಾರಣೆಯಿಂದ ವಿನಾಯಿತಿ ನೀಡಿದರು.

ಇಂದು ರಾತ್ರಿಯಿಂದ ನವೆಂಬರ್ 29 ಭಾನುವಾರದ ತನಕ ಡಿಕೆ ಶಿವಕುಮಾರ್ ಕಾರ್ಯಕ್ರಮವನ್ನು ನಿಗದಿ ಮಾಡಿದ್ದಾರೆ.

ಡಿಕೆಶಿ ಪ್ರವಾಸದ ಮಾಹಿತಿ ಹೀಗಿದೆ

ಇಂದು ಗುಜರಾತಿನ ವಡೋದರಕ್ಕೆ ರಾತ್ರಿ 7ಕ್ಕೆ ವಿಶೇಷ ವಿಮಾನದಲ್ಲಿ ತೆರಳಲಿರುವ ಡಿಕೆಶಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಅಹಮದ್ ಪಟೇಲ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ನಾಳೆ ರಾತ್ರಿ ಗೋವಾದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಶಿರಸಿ, ಶನಿವಾರ ಉಡುಪಿಯಲ್ಲಿ ತಂಗಲಿರುವ ಡಿಕೆಶಿ ಭಾನುವಾರ ರಾತ್ರಿ ಬೆಂಗಳೂರಿಗೆ ವಾಪಸ್ ಮರಳಲಿದ್ದಾರೆ.

Edited By : Nirmala Aralikatti
PublicNext

PublicNext

25/11/2020 05:49 pm

Cinque Terre

148.73 K

Cinque Terre

3

ಸಂಬಂಧಿತ ಸುದ್ದಿ