ಹೊಸದಿಲ್ಲಿ: ಒಂದು ತಿಂಗಳ ಹಿಂದೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು ನಿಧನರಾಗಿದ್ದಾರೆ. ಸೋನಿಯಾ ಗಾಂಧಿ ಆಪ್ತ ಎಂದೇ ಬಿಂಬಿತವಾಗಿದ್ದ ಕಾಂಗ್ರೆಸ್‌ನ ನಿಷ್ಠಾವಂತ ನಾಯಕ ಬುಧವಾರ ಮುಂಜಾನೆ 3.30ರ ಸುಮಾರಿಗೆ ನಿಧನರಾಗಿದ್ದಾರೆ. 71 ವರ್ಷ ವಯಸ್ಸಿನ ಅಹ್ಮದ್ ಪಟೇಲ್ ನಿಧನರಾದ ಹಿನ್ನೆಲೆ ತನ್ನ ಆಪ್ತನ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬರೆದುಕೊಂಡಿದ್ದಾರೆ.
ಅಹ್ಮದ್ ಪಟೇಲ್ ಅವರ ಸಾವಿನಿಂದ ತುಂಬಲಾರದ ನಷ್ಟವಾಗಿದ್ದು, ಆಪ್ತ ಒಡನಾಡಿ, ನಿಷ್ಠಾವಂತ ಸಹೋದ್ಯೋಗಿ ಹಾಗೂ ಸ್ನೇಹಿತನನ್ನು ಕಳೆದುಕೊಂಡಂತೆ ಆಗಿದೆ" ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ತನ್ನ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕಾಗಿ ಮುಡಿಪಾಗಿಟ್ಟ ಸಹೋದ್ಯೋಗಿಯನ್ನು ಕಳೆದುಕೊಂಡಿದ್ದೇನೆ. ಅವರ ಪ್ರಾಮಾಣಿಕತೆ, ವಸ್ತುನಿಷ್ಠತೆ, ಕರ್ತವ್ಯದಲ್ಲಿ ತೋರುವ ಬದ್ಧತೆಯ ಲಕ್ಷಣಗಳು ಅಹ್ಮದ್ ಪಟೇಲೆ ಎಲ್ಲರಂತೆ ಅಲ್ಲ ಎನ್ನುವುದನ್ನು ಸಾರಿ ತೋರಿಸಿದ್ದರು ಎಂದು ಹೇಳಿದ್ದಾರೆ. ಅವರ ನಿಧನಕ್ಕೆ ನಾನು ಶೋಕ ವ್ಯಕ್ತಪಡಿಸುತ್ತಿದ್ದೇನೆ ಮತ್ತು ಅವರ ದುಃಖಿತ ಕುಟುಂಬಕ್ಕಾಗಿ ನಾನು ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದರು. ಹಲವು ದಶಕಗಳ ಕಾಲ ಸೋನಿಯಾ ಗಾಂಧಿ ಅವರ ಆಪ್ತ ರಾಜಕೀಯ ಕಾರ್ಯದರ್ಶಿಯಾಗಿ ಅಹ್ಮದ್ ಪಟೇಲ್ ಕಾರ್ಯನಿರ್ವಹಿಸಿದ್ದರು. ಹಲವು ಬಾರಿ ಕಾಂಗ್ರೆಸ್‌ನಿಂದ ರಾಜ್ಯಸಭೆ ಸದಸ್ಯರಾಗಿದ್ದರು.
PublicNext
25/11/2020 12:52 pm