ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಶು ವೈದ್ಯಕೀಯ ಮಹಾವಿದ್ಯಾಲಯದ ಸೌಕರ್ಯಗಳ ಕೊರತೆಗೆ ಸಚಿವರ ಸ್ಪಂದನೆ

ಗದಗ: ಮಹಾವಿದ್ಯಾಲಯದಲ್ಲಿ ಶಿಕ್ಷಕರ ಮತ್ತು ಲ್ಯಾಬ್‌ಗಳ ಕೊರತೆಯಿದ್ದು ಶೈಕ್ಷಣಿಕ ಏಳಿಗೆಯಿಂದ ಹಿನ್ನಡೆಯಾಗುತ್ತಿದೆ. ಆದಷ್ಟು ಬೇಗ ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕೆಲವು ಮೂಲ ಸೌಕರ್ಯವನ್ನು ಒದಗಿಸಲು ಪಶುಸಂಗೋಪನೆ, ವಕ್ಫ್‌ ಹಾಗೂ ಹಜ್ ಸಚಿವರಾದ ಪ್ರಭು ಚವ್ಹಾಣ್ ಅವರಿಗೆ ಮಹಾವಿದ್ಯಾಲಯದ ಡೀನ್ ಡಾ.ಆರ್. ನಾಗರಾಜ್ ಮನವಿ ಮಾಡಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರದ ಮಟ್ಟದಲ್ಲಿ ಇಲಾಖೆಯ ಮಟ್ಟದಲ್ಲಿ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಪಶು ವೈದ್ಯಕೀಯ ಮಹಾವಿದ್ಯಾಲಯವು ಉತ್ತಮ ಶಿಕ್ಷಣ ನೀಡುವುದರೊಂದಿಗೆ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆದ ಎಲ್ಲರೂ ಉತ್ತಮ ಸಮಾಜ ಕಾರ್ಯ ಮಾಡುವಂತಾಗಲಿ. ಈ ನಿಟ್ಟಿನಲ್ಲಿ ಮಹಾವಿದ್ಯಾಲಯ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಪಶು ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡ ನಿರ್ಮಾಣದ ಗುಣಮಟ್ಟ ಕಂಡು ಬೇಸರ ವ್ಯಕ್ತಪಡಿಸಿದ ಸಚಿವರು, ಉತ್ತಮ ರೀತಿಯಲ್ಲಿ ಕಟ್ಟಡ ನಿರ್ವಹಣೆ ಅಗತ್ಯವಾಗಿದೆ. ಮಹಾವಿದ್ಯಾಲಯದ ಆಡಳಿತ ಉತ್ತಮ ನಿರ್ವಹಣೆ ಮಾಡುವಲ್ಲಿ ಗಮನ ಹರಿಸುವಂತೆ ತಿಳಿಸಿದರು.

ಅಂದಾಜು 150 ಏಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಮಹಾವಿದ್ಯಾಲಯ ಸುವ್ಯವಸ್ಥಿತವಾದ ಪಶು ಚಿಕಿತ್ಸಾ ಸಂಕೀರ್ಣವನ್ನು ಹೊಂದಿದೆ ಎಂದು ತಿಳಿಸಿ ಮಹಾವಿದ್ಯಾಲಯದ ಕೆಲವು ವಿಭಾಗಗಳಿಗೆ ಭೇಟಿ ನೀಡಿ, ಆವರಣದಲ್ಲಿ ಗಿಡ ನೆಡುವ ಮೂಲಕ ಮಹಾವಿದ್ಯಾಲಯದ ಕಾರ್ಯಗಳಿಗೆ ಶುಭ ಹಾರೈಸಿದರು.

Edited By : Vijay Kumar
PublicNext

PublicNext

20/11/2020 03:50 pm

Cinque Terre

44.22 K

Cinque Terre

0

ಸಂಬಂಧಿತ ಸುದ್ದಿ