ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರವಿದೆ. ಆದರೆ ಈ ಮೈತ್ರಿ ರಾಜ್ಯ ರಾಜಕಾರಣಕ್ಕೆ ಸೀಮಿತವೇ ಎನ್ನುವ ಪ್ರಶ್ನೆ ಶುರುವಾಗಿದೆ.
ಹೌದು. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆ, ಎನ್ಸಿಪಿಗೆ ಸಾಥ್ ನೀಡಿರುವ ಕಾಂಗ್ರೆಸ್ ಇದೀಗ ಎರಡೂ ಪಕ್ಷಗಳಿಗೂ ಟಕ್ಕರ್ ನೀಡಲು ಸಿದ್ಧವಾಗಿದೆ. 2022ಕ್ಕೆ ಬೃಹನ್ಮುಂಬೈ ನಗರ ಪಾಲಿಕೆಗೆ (ಬಿಎಂಸಿ) ಚುನಾವಣೆ ನಡೆಯಲಿದೆ. ಶಿವಸೇನೆಯು ಕಳೆದ 30 ವರ್ಷಗಳಿಂದ ಬಿಎಂಸಿ ಆಡಳಿತವನ್ನು ಎನ್ಡಿಎ ಸರ್ಕಾರದೊಂದಿಗಿನ ಮೈತ್ರಿಯಿಂದಾಗಿ ತನ್ನದಾಗಿಸಿಕೊಂಡಿದೆ. ಆದರೆ ಈ ವರ್ಷ ಎನ್ಡಿಎಗೆ ಕೈ ಕೊಟ್ಟಿರುವ ಶಿವಸೇನೆ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಇತ್ತ ಕಾಂಗ್ರೆಸ್ ಮೃತ್ರಿಯನ್ನು ಕೈಬಿಟ್ಟು ಸ್ವತಂತ್ರವಾಗಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸಿದೆ. ಹೀಗಾಗಿ ಇದೀಗ ಬಿಎಂಸಿ ಪಟ್ಟ ಶಿವಸೇನೆ ಕೈ ತಪ್ಪುತ್ತಾ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
PublicNext
20/11/2020 07:38 am