ಬೆಂಗಳೂರು: ಸರ್ಕಾರದ ಎಲ್ಲಾ ಯೋಜನೆಗಳಿಗೆ ತಂತ್ರಜ್ಞಾನ ಒಂದು ಭಾಗವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
'ಬೆಂಗಳೂರು ಟೆಕ್ ಸಮ್ಮಿಟ್-2020'ನ್ನು ಇಂದು ಡಿಜಿಟಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಡಿಜಿಟಲ್ ಇಂಡಿಯಾ ನಮ್ಮ ಜೀವನದ ಭಾಗವಾಗಿ ಬದಲಾವಣೆಯಾಗಿದ್ದು, ಭೀಮ್ ಯುಪಿಐ ಅದಕ್ಕೆ ಒಂದು ಉದಾಹರಣೆಯಾಗಿದೆ. ಮಾಹಿತಿ ಯುಗದಲ್ಲಿನ ಬದಲಾವಣೆ ಕೈಗಾರಿಕಾ ಯುಗಕ್ಕಿಂತಲೂ ಕ್ಷಿಪ್ರ ಎಂದು ತಿಳಿಸಿದರು.
ತಂತ್ರಜ್ಞಾನದಿಂದಲೇ ಆಯುಷ್ಮಾನ ಭಾರತ್ ಯಶಸ್ವಿಯತ್ತ ಸಾಗಿದೆ. ಇದರಿಂದ ಬಡವರಿಗೆ ನೆರವಾಗುತ್ತದೆ. ಇಂದಿನ ತಂತ್ರಜ್ಞಾನದಿಂದ ಭಾರತದಿಂದ ಯಾವುದೇ ಮೂಲೆಯಿಂದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗಲಿದೆ. ತಂತ್ರಜ್ಞಾನದಿಂದ ಭಾರತೀಯರ ಜೀವನ ವೇಗವಾಗಿ ಬದಲಾಗುತ್ತಿದೆ ಎಂದರು.
PublicNext
19/11/2020 12:15 pm