ವಾಷಿಂಗ್ಟನ್: ಅಮೆರಿಕದ ನೂತನ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಸಚಿವ ಸಂಪುಟದಲ್ಲಿ ಇಬ್ಬರು ಭಾರತೀಯ ಅಮೆರಿಕನ್ನರಿಗೆ ಪ್ರಮುಖ ಖಾತೆಗಳು ಖಚಿತ ಎನ್ನಲಾಗಿದೆ.
ಅಮೆರಿಕದ ಸರ್ಜನ್ ಜನರಲ್ ವಿವೇಕ್ ಮೂರ್ತಿ ಹಾಗೂ ಸ್ಟ್ಯಾಂಡ್ ಫೋರ್ಡ್ ವಿವಿಯ ಪ್ರೊಫೆಸರ್ ಅರುಣ್ ಮಜುಮ್ದಾರ್ ಅವರಿಗೆ ಜೋ ಬೈಡನ್-ಕಮಲಾ ಹ್ಯಾರಿಸ್ ಆಡಳಿತದಲ್ಲಿ ಪ್ರಮುಖ ಖಾತೆಗಳು ಲಭ್ಯವಾಗಲಿದೆ.
ವಿವೇಕ್ ಮೂರ್ತಿ ಕೋವಿಡ್-19 ಗೆ ಸಂಬಂಧಿಸಿದಂತೆ, ಈಗಾಗಲೇ ಜೋ ಬೈಡನ್ ಅವರ ಪ್ರಮುಖ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಅಮೆರಿಕದ ಆರೋಗ್ಯ ಹಾಗೂ ಮಾನವ ಸೇವೆಗಳ ಖಾತೆಯ ಜವಾಬ್ದಾರಿ ಸಿಗಲಿದೆ. ಮಜುಮ್ದಾರ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಏಜೆನ್ಸಿ-ಎನರ್ಜಿಯ ಯೋಜನಾ ಸಂಶೋಧನೆಯ ಪ್ರಥಮ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೈಡನ್’ಗೆ ಉನ್ನತ ಮಟ್ಟದ ಸಲಹೆಗಾರರಾಗಿದ್ದಾರೆ.
PublicNext
18/11/2020 03:56 pm