ಬೆಂಗಳೂರು: ಇನ್ನೆರಡು ದಿನದಲ್ಲಿ ಯಡಿಯೂರಪ್ಪ ಸಂಪುಟದ ಭವಿಷ್ಯ ನಿರ್ಧಾರವಾಗಲಿದೆ ಇದಕ್ಕೆ ಪುಷ್ಠಿ ನೀಡುವಂತಿದೆ ಬಿಜೆಪಿ ಹೈಕಮಾಂಡ್ ನಡೆ.
ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಹೈಕಮಾಂಡ್ ಓಕೆ ಎಂದಲ್ಲಿ ಸಿಎಂ ದೆಹಲಿಗೆ ಹಾರಲಿದ್ದಾರೆ.
ಹೈಕಮಾಂಡ್ ಜೊತೆ ನೇರವಾಗಿ ಮಾತನಾಡಲಿದ್ದಾರೆ.
ಒಂದು ವೇಳೆ ಹೈಕಮಾಂಡ್ ಈಗ ಬೇಡ ಅಂದ್ರೆ ಡಿಸೆಂಬರ್ ಗೆ ಮುಂದೂಡಿಕೆಯಾಗುವ ಸಾಧ್ಯತೆಗಳು ಕೂಡ ಇವೆ. ಹಾಗಾಗಿ ಬಿಜೆಪಿ ಹೈಕಮಾಂಡ್ ನಿಂದ ಬರುವ ಸಂದೇಶಕ್ಕೆ ಯಡಿಯೂರಪ್ಪ ಕಾಯುತ್ತಿದ್ದಾರೆ.
ಇಂದು ಅಥವಾ ನಾಳೆ ಹೈಕಮಾಂಡ್ ನಾಯಕರ ಜೊತೆ ಬಿಎಸ್ ವೈ ದೂರವಾಣಿ ಮೂಲಕ ಮಾತುಕತೆ ನಡೆಸಬಹುದು.
ಈಗಾಗಲೇ ಎಂಟಿಬಿ, ಶಂಕರ್ ಸಚಿವ ಸ್ಥಾನಕ್ಕೆ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಮೂವರು ವಲಸಿಗರು, ಮೂವರು ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ಕೊಡಲು ಅನುಮತಿ ಕೇಳಲು ಯಡಿಯೂರಪ್ಪ ಪ್ಲ್ಯಾನ್ ಮಾಡಿದ್ದಾರೆ.
ಆದರೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರವೇ ಮಹತ್ವದ್ದಾಗಿದೆ.
PublicNext
14/11/2020 10:05 am