ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇವಿಎಂ ಮೂಲಕ ಮತದಾನ: ಕಾಂಗ್ರೆಸ್ಸಿಗೆ ಮತ್ತೆ ಅನುಮಾನ

ನವದೆಹಲಿ- ಬಿಹಾರ ಚುನಾವಣಾ ಫಲಿತಾಂಶದ ವೇಳೆ ಗೆಲುವಿನ ತುತ್ತ ತುದಿಗೆ ಬಂದ ಮಹಾಘಟಬಂಧನ್ ಭಾರೀ ಹಿನ್ನಡೆಯಿಂದ ಸೋಲು ಕಂಡಿದೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೇ ಮತ್ತೆ ಕಾಂಗ್ರೆಸ್ ನಾಯಕರು ಇವಿಎಂ ಮೇಲೆ‌ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್ ಹಾಗೂ ಇತರ ನಾಯಕರು 'ಇವಿಎಂ'ಗಳನ್ನು ತಿರುಚಲು ಸಾಧ್ಯವಿದೆ. ಈ ಕ್ಷೇತ್ರಗಳಲ್ಲಿ ನಾವು ಸೋಲಲು ಎಂದೂ ಸಾಧ್ಯವಿಲ್ಲ. ಎಂದು ಶಂಕೆ ಹೊರಹಾಕಿದ್ದಾರೆ.

ಅದರಂತೆ ಕಾಂಗ್ರೆಸ್ ಪಕ್ಷದ ಇನ್ನೊಬ್ಬ ನಾಯಕ ಉದಿತ್ ರಾಜ್ ಭೂಮಿಯಿಂದ ಸ್ಯಾಟಲೈಟ್ ಗಳನ್ನು ನಿಯಂತ್ರಿಸಬಹುದಾದರೆ ಇವಿಎಂಗಳನ್ನು ಹ್ಯಾಕ್ ಮಾಡದಿರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

Edited By : Nagaraj Tulugeri
PublicNext

PublicNext

11/11/2020 11:47 am

Cinque Terre

52.47 K

Cinque Terre

17

ಸಂಬಂಧಿತ ಸುದ್ದಿ