ಹೈದರಾಬಾದ್: ಆಡಳಿತರೂಢ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ಗೆ ತೆಲಂಗಾಣದ ದುಬ್ಬಾಕಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನೆಕ್ ಟು ನೆಕ್ ಫೈಟ್ ನೀಡಿದ ಬಿಜೆಪಿ ಜಯಭೇರಿ ಬಾರಿಸಿದೆ.
ಬಿಜೆಪಿಯ ಮಾಧವನೇನಿ ರಘುನಂದನ್ ರಾವ್ ಅವರು ಪ್ರತಿಸ್ಪರ್ಧಿ ಟಿಆರ್ಎಸ್ನ ಸೋಲಿಪೇಟಾ ಸುಜಾತಾ ಅವರ ವಿರುದ್ಧ ಸುಮಾರು 1,118 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ತೆಲಂಗಾಣದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಚೆರುಕು ಶ್ರೀನಿವಾಸ್ ರೆಡ್ಡಿ ಅವರು ಹೀನಾಯ ಸೋಲು ಕಂಡಿದ್ದಾರೆ.
PublicNext
10/11/2020 11:42 pm