ಬೆಂಗಳೂರು- ರಾಜ್ಯ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಏನೂ ಇಲ್ಲಿ ಬಂದಿಲ್ಲ. ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ ಆದರೂ ರಾಜಕೀಯ ಪಕ್ಷಗಳಿಗೆ ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭಾ ಉಪಚುನಾವಣೆ ಪ್ರತಿಷ್ಟೆಯ ವಿಚಾರವಾಗಿತ್ತು.
ಆರ್ ಆರ್ ನಗರ ಕ್ಷೇತ್ರದ ಫಲಿತಾಂಶ ಬಂದಿದ್ದು ಕಮಲ ಪಾಳಯದ ಅಭ್ಯರ್ಥಿ 1ಲಕ್ಷ 3ಸಾವಿರ 291ಮತಗಳನ್ನು ಪಡೆದು 44,548ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.
ಇದಕ್ಕೆ ಚುನಾವಣಾಧಿಕಾರಿಗಳ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದ ಮುನಿರತ್ನ ಅವರ ಸಮೀಪದ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಕುಸುಮಾ ಅವರಿಗೆ 58,743 ಮತಗಳನ್ನು ಪಡೆದಿದ್ದಾರೆ.
PublicNext
10/11/2020 02:01 pm