ಧಾರವಾಡ- ಜಿ.ಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಸಾಲು-ಸಾಲು ತಪ್ಪುಗಳಿವೆ. ಇದು ಸದ್ಯ ನಡೆಯುತ್ತಿರುವ ಸಿಬಿಐ ಪ್ರಕರಣದಲ್ಲಿ ತಿಳಿದುಬಂದಿದೆ ಎಂದು ವಿಶ್ವಾಸಾರ್ಜ ಮೂಲಗಳು ತಿಳಿಸಿವೆ.
ಸಾಕ್ಷ್ಯ ನಾಶ ಮಾಡಲೆಂದು ಪೊಲೀಸ್ ಅಧಿಕಾರಿಗಳೇ ಈ ರೀತಿ ಮಾಡಿದರೇ? ಎಂಬಿತ್ಯಾದಿ ಹಲವು ಪ್ರಶ್ನೆಗಳು ಈ ಮೂಲಕ ಎದ್ದಿವೆ. ದೋಷಾರೋಪ ಪಟ್ಟಿಯಲ್ಲಿ ದೋಷ ಮಾಡಲು ಪೊಲೀಸ್ ಅಧಿಕಾರಿಗಳು, ಜಿಪಂ ಎಇಇ ಹಾಗೂ ಕೆಎಎಸ್ ಅಧಿಕಾರಿಗಳು ಕೂಡ ಸಾಕ್ಷ್ಯನಾಶಕ್ಕೆ ಕೈ ಜೋಡಿಸಿದ್ದಾರೆ ಎಂಬ ಶಂಕೆ ಸಿಬಿಐ ಅಧಿಕಾರಿಗಳಿಗಿದೆ.
ತನಿಖೆ ಆರಂಭಿಸಲು ಸಿಬಿಐ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ಒಂದು ಪ್ರಮುಖ ಅಸ್ತ್ರವಾಗಿತ್ತು. ಆದ್ರೆ ಆದೇ ಚಾರ್ಜ್ ಶೀಟ್ ನಲ್ಲಿ ಸುಮಾರು 20 ಕ್ಕೂ ಹೆಚ್ಚು ದೋಷಗಳಿರುವುದು ಸ್ಪಷ್ಟವಾಗಿ ಸಿಬಿಐ ಅಧಿಕಾರಿಗಳಿಗೆ ಗೊತ್ತಾಗಿದೆ.
PublicNext
09/11/2020 12:28 pm