ಹೊಸದಿಲ್ಲಿ: ಇಂದು ಬಿಜೆಪಿ ಭೀಷ್ಮ ಎಂದೇ ಚಿರಪರಿಚತರಾದ ಹಿರಿಯ ನಾಯಕ ಎಲ್ಕೆ ಅಡ್ಡಾಣಿ 93ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಬಿಜೆಪಿಯ ಸಂಸ್ಥಾಪಕ ನಾಯಕನ ಜನ್ಮದಿನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಬಿಜೆಪಿಯನ್ನು ಜನಮಾನಸದ ಪಕ್ಷವನ್ನಾಗಿ ಬೆಳೆಸಿದ ಹಿರಿಯ ಎಲ್ ಕೆ ಅಡ್ವಾಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.
ಪಕ್ಷದ ಕೋಟ್ಯಂತರ ಕಾರ್ಯಕರ್ತರು ಹಾಗೂ ಸಮಸ್ತ ಭಾರತೀಯರಿಗೆ ಪ್ರೇರಣಾ ಶಕ್ತಿಯಾಗಿರುವ ಎಲ್ಕೆ ಅಡ್ವಾಣಿ, ಅವಿರತವಾಗಿ ದೇಶ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಯಕ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಎಲ್ಕೆ ಅಡ್ವಾಣಿ ಅವರ ಮಾರ್ಗದರ್ಶನದಲ್ಲಿ ಪಕ್ಷ ಮತ್ತಷ್ಟು ಪರಿಣಾಮಕಾರಿಯಾಗಿ ಜನರನ್ನು ತಲುಪಲಿದ್ದು, ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿ ನಾವೆಲ್ಲಾ ದೇಶಸೇವೆ ಮಾಡುವುದಾಗಿ ಪ್ರಧಾನಿ ಮೋದಿ ನುಡಿದಿದ್ದಾರೆ.
ಅಡ್ವಾಣಿಗೆ ಶುಭ ಕೋರಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ಕಾರ್ಯಕರ್ತರಾಗಿ, ಪಕ್ಷದ ಅಧ್ಯಕ್ಷರಾಗಿ ಹಾಗೂ ಉಪ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಾಗಿ ಎಲ್ಕೆ ಅಡ್ವಾಣಿ ದೇಶಕ್ಕೆ ನೀಡಿದ ಕೊಡುವೆ ಅಪಾರ ಎಂದು ಹೇಳಿದ್ದಾರೆ.
ದೇಶದ ಗೃಹ ಸಚಿವರಾಗಿ ಎಲ್ಕೆ ಅಡ್ವಾಣಿ ಸಲ್ಲಿಸಿದ ಸೇವೆ ಅನುಕರಣೀಯವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ತಾವೂ ಕೂಡ ಮುಂದುವರೆಯುತ್ತಿರುವುದಾಗಿ ಅಮಿತ್ ಶಾ ಹೇಳಿದ್ದಾರೆ.
ಇನ್ನು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೂಡಾ ಶುಭಾಶಯ ಕೋರಿದ್ದಾರೆ.
'ಪಕ್ಷದ ಹಿರಿಯ ನೇತಾರ, ಮಾಜಿ ಉಪಪ್ರಧಾನಮಂತ್ರಿ, ಪದ್ಮವಿಭೂಷಣ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಜನ್ಮದಿನದ ಆದರಪೂರ್ವಕ ಶುಭಾಶಯಗಳು.
ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ'. ಎಂದು ಟ್ವೀಟ್ ಮಾಡಿದ್ದಾರೆ.
ಇವರಿಷ್ಟೇ ಇನ್ನೂ ಅನೇಕ ಗಣ್ಯರು ಎಲ್ ಕೆ ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯ ರವಾನಿಸಿದ್ದಾರೆ.
PublicNext
08/11/2020 01:29 pm