ಗದಗ: ಕೃಷಿ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಇಂದು ಬೆಳ್ಳಂಬೆಳಿಗ್ಗೆ ಗದಗ ಜಿಲ್ಲೆಗೆ ಭೇಟಿ ನೀಡಿದ್ದಾರೆ. ವಿದೇಶ ಪ್ರವಾಸ ಮುಗಿಸಿ ನೇರವಾಗಿ ಗದಗ ಜಿಲ್ಲೆಗೆ ಆಗಮಿಸಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು.
ಗದಗ ತಾಲೂಕಿನ ಹೊಂಬಳ, ಎಚ್.ಎಸ್ ವೇಂಕಟಾಪೂರ ಹಾಗೂ ನರಗುಂದ ತಾಲೂಕಿನ ಕುರ್ಲಗೇರಿ ಬಳಿಯ ಹೆಸರು, ಶೇಂಗಾ, ಉದ್ದು, ಮೆಣಸಿನಕಾಯಿ ಬೆಳೆ ವೀಕ್ಷಣೆ ಮಾಡಿದ್ರು. ಈ ವೇಳೆ ಸಚಿವರೆದುರಿಗೆ ರೈತರು ತಮ್ಮ ನೋವು ತೊಡಿಕೊಂಡ್ರು. ಈ ಸಂದರ್ಭದಲ್ಲಿ ಪ್ರಭಾರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.
ಇನ್ನು ಜಿಲ್ಲಾ ಉಸ್ತುವಾರಿ ಸಚಿವರು, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುವ ಮಾಹಿತಿಯನ್ನ ಜಿಲ್ಲಾಡಳಿತ ಮಾಧ್ಯಮದವರಿಂದ ಮುಚ್ಚಿಟ್ಟಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.
PublicNext
09/08/2022 03:45 pm