ಬೆಂಗಳೂರು: ಭ್ರಷ್ಟಾಚಾರ ಆರೋಪ ಇರುವ ಕೋಡಿಹಳ್ಳಿ ಚಂದ್ರಶೇಖರ್ ಅವರು ಆರೋಪ ಮುಕ್ತರಾಗುವವರೆಗೂ ಯಾವ ಕಾರಣಕ್ಕೂ ಹಸಿರು ಟವೆಲ್ ಹಾಕಬಾರದು. ಮತ್ತು ಅವರಿಗೂ ಕರ್ನಾಟಕ ರಾಜ್ಯ ರೈತ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕೋಡಿಹಳ್ಳಿ ಅವರು ಮೊಂಡುತನ ತೋರಿಸಿ ತಾನೇ ಸರ್ವಾಧ್ಯಕ್ಷ ಎಂದು ಹೇಳುತ್ತಿರುವುದು ರೈತ ಸಂಘದ ಮೂಲ ಆಶಯಗಳಿಗೆ ಅಪಚಾರ ಬಗೆದಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಸಭೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಈಗಲೂ ಕೋಡಿಹಳ್ಳಿ ತಾನೇ ಅಧ್ಯಕ್ಷ ಎಂದು ಹೇಳುತ್ತಿದ್ದಾರೆ. ಹಾಗೂ ಕೆಲವು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದ್ರೆ ರಾಜ್ಯ ರೈತ ಸಂಘದ ಎಲ್ಲ ಪದಾಧಿಕಾರಿಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ಕೋಡಿಹಳ್ಳಿ ಅವರನ್ನು ಸಂಘದಿಂದ ವಜಾ ಮಾಡಲಾಗಿದೆ ಎಂದು ಬಸವರಾಜಪ್ಪ ಹೇಳಿದ್ದಾರೆ.
PublicNext
23/06/2022 09:12 pm