ಉದ್ಯಾವರ: ಸೋಮವಾರ ಭಾರತ್ ಬಂದ್ ಗೆ ರೈತ ಸಂಘಟನೆಗಳು ಕರೆ ನೀಡಿರುವ ವಿಚಾರವಾಗಿ ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ರೈತ ಹೋರಾಟಗಾರರ ಜೊತೆ 11 ಸುತ್ತಿನ ಮಾತುಕತೆ ಆಗಿದೆ ಎಂದ ಸಚಿವೆ,ಮತ್ತೊಮ್ಮೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ.
ಕೇಂದ್ರ ಕೃಷಿ ಬಿಲ್ ನಿಂದ ಲಾಭ ಏನು ನಷ್ಟ ಏನು ಎಂದು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ರೈತ ಮುಖಂಡರಿಗೆ ಹೇಳಿದ್ದಾರೆ.
ಚರ್ಚೆ ಆಗದೆ ಲಾಭ ನಷ್ಟದ ಬಗ್ಗೆ ಗೊತ್ತಾಗುವುದಿಲ್ಲ ಎಂದಿರುವ ಶೋಭಾ,ಕೇಂದ್ರದ ಬಿಲ್ ಅನುಷ್ಠಾನ ಮಾಡಿದ ರಾಜ್ಯಗಳ ರೈತರಿಗೆ ಲಾಭ ಆಗಿದೆ.ಆ ರಾಜ್ಯದ ವರದಿಯನ್ನು ರೈತ ಹೋರಾಟಗಾರರು ತರಿಸಿಕೊಳ್ಳಬೇಕು.ರೈತರ ವಿಚಾರದಲ್ಲಿ ರಾಜಕೀಯ ಇಲ್ಲ.ರೈತರ ವಿಚಾರದಲ್ಲಿ ಧರ್ಮ ಮತ್ತು ಪಕ್ಷಗಳು ಇಲ್ಲ.ದೇಶಕ್ಕೆ ಅನ್ನ ಕೊಡುವ ರೈತರ ಜೊತೆ ಚರ್ಚೆಗೆ ಸಿದ್ಧ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
PublicNext
25/09/2021 02:21 pm