ನವದೆಹಲಿ: ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸಲು ರೈತರು ಮುಂದಾಗಿದೆ. ಇದಕ್ಕಾಗಿ ಮತ್ತೆ ಭಾರತ್ ಬಂದ್ ಬಿಸಿ ಎದುರಿಸಬೇಕಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘಟನೆ ಸೆಪ್ಟೆಂಬರ್ 25ಕ್ಕೆ ಭಾರತ್ ಬಂದ್ ಘೋಷಿಸಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 40ಕ್ಕೂ ಹೆಚ್ಚು ರೈತ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿತು. ಕೊರೋನಾ ಸೇರಿದಂತೆ ಅದೆಷ್ಟೆ ಅಡೆತಡೆ ಎದುರಿಸಿದರೂ ರೈತ ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ಕೊರೋನಾ 2ನೇ ಅಲೆ ಕಾರಣ ಆಂದೋಲನ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇದೀಗ ಸಂಯಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಘೋಷಿಸಿದೆ.
PublicNext
28/08/2021 03:53 pm