ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರಾಖಂಡದ ಆರೋಗ್ಯ ಸಚಿವರಿದ್ದ ಕಾರು ಪಲ್ಟಿ- ತಪ್ಪಿದ ಭಾರಿ ದುರಂತ

ಡೆಹ್ರಾಡೂನ್: ಉತ್ತರಾಖಂಡದ ಆರೋಗ್ಯ ಸಚಿವ ಹಾಗೂ ಬಿಜೆಪಿ ನಾಯಕ ಡಾ.ಧನ್ ಸಿಂಗ್ ರಾವತ್ ಅವರ ಕಾರು ಮಂಗಳವಾರ ಅಪಘಾತಕ್ಕೀಡಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವರದಿಗಳ ಪ್ರಕಾರ, ಸಚಿವ ಡಾ.ಧನ್ ಸಿಂಗ್ ರಾವತ್‌ ಅವರು ಮಂಗಳವಾರ ಶ್ರೀನಗರ ವಿಧಾನಸಭೆಯ ಥಾಲಿಸೈನ್‌ಗೆ ಭೇಟಿ ನೀಡಿದ್ದರು. ವಿಹಾರದ ನಂತರ ಅವರು ಸಂಜೆ ರಾಜಧಾನಿ ಡೆಹ್ರಾಡೂನ್‌ಗೆ ತೆರಳುತ್ತಿದ್ದರು. ಸಂಜೆ 6.30ರ ಸುಮಾರಿಗೆ ಚೌರಿಖಾಲ್ ಬಳಿ ರಸ್ತೆಯಲ್ಲಿ ಮಂಜು ಕವಿದ ವಾತಾವರಣ ಇದ್ದಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಚಿವರೊಂದಿಗೆ ಡಿಸಿಡಿಎಫ್ ಅಧ್ಯಕ್ಷ ನರೇಂದ್ರ ರಾವತ್, ಮಾಜಿ ಜಿಲ್ಲಾಧ್ಯಕ್ಷ ಮತ್ವರ್ ಸಿಂಗ್ ರಾವತ್ ಮತ್ತು ಪಿಆರ್‌ಒ ಧೌಂಡಿಯಾಲ್ ಕೂಡ ವಾಹನದಲ್ಲಿದ್ದರು. ಅಪಘಾತ ಸಂಭವಿಸುತ್ತಿದ್ದಂತೆ ಮತ್ತೊಂದು ಕಾರಿನ ವ್ಯವಸ್ಥೆ ಮಾಡಿ ಸಚಿವರನ್ನು ಅಲ್ಲಿಂದ ಕಳುಹಿಸಿಕೊಡಲಾಯಿತು.

Edited By : Vijay Kumar
PublicNext

PublicNext

14/12/2021 09:52 pm

Cinque Terre

80.29 K

Cinque Terre

0

ಸಂಬಂಧಿತ ಸುದ್ದಿ