ನವದೆಹಲಿ : ನಾಡಿನಲ್ಲಿ ಎದುರಾಗಿದ್ದ ವಿದ್ಯುತ್ ಬವಣೆಯನ್ನು ನೀಗಿಸಲು ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತನ್ನು ಉಪಯೋಗಿಸಿಕೊಂಡು ಶರಾವತಿ ಜಲವಿದ್ಯುತ್ ಯೋಜನೆಯನ್ನು 1960 ರ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಯಿತು.
ಈ ಒಂದು ಐತಿಹಾಸಿಕ ಯೋಜನೆಯಿಂದ ಜಲಾಶಯದ ಹಿನ್ನೀರಿನಲ್ಲಿ ವಾಸವಿದ್ದ ಸಾವಿರಾರು ಕುಟುಂಬ ತಮಗೆ ಆಧಾರವಾಗಿದ್ದ ಸಾವಿರಾರು ಎಕರೆ ಭೂಮಿ ಮುಳುಗಡೆ ಆಗುತ್ತದೆ, ಎಂಬ ಕಲ್ಪನೆ ಇದ್ದರೂ ಜಲಾಶಯ ನಿರ್ಮಾಣಕ್ಕೆ ತಮ್ಮ ಸೂಕ್ತ ಸಹಕಾರ ನೀಡಿದ ಪರಿಣಾಮ ಇಂದು ರಾಜ್ಯದ ಬಹುಪಾಲು ವಿದ್ಯುತ್ ಈ ಕೇಂದ್ರದಿಂದ ಉತ್ಪಾದನೆ ಆಗುತ್ತಿದೆ.
ನಂತರ ಆಳಿದ ಸರ್ಕಾರಗಳು ಸೂಕ್ತ ಸಮಯದಲ್ಲಿ ಐತಿಹಾಸಿಕ ನಿರ್ಧಾರಕ್ಕೆ ತನ್ನ ನಿರ್ದಿಷ್ಟ ಇಚ್ಛಾಶಕ್ತಿ ತೋರದೆ ಕಳೆದ 60 ವರ್ಷಕ್ಕೂ ಅಧಿಕ ಸಮಯದಿಂದ ಈ ಗಂಭೀರ ಸಮಸ್ಯೆ ಸಮಸ್ಯೆಯಾಗಿ ಉಳಿದುಕೊಂಡಿದೆ.
ಇಲ್ಲಿಯವರೆಗೂ ಎದುರಾದ ತಾಂತ್ರಿಕ ಮತ್ತು ತಾಂತ್ರಿಕೇತರ ಹಾಗೂ ಇನ್ನಿತರ ಆಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಕೆಳ ಹಂತದ ನ್ಯಾಯಾಲಯದಿಂದ ಹಿಡಿದು ಉಚ್ಚ ನ್ಯಾಯಾಲಯ ದಾಟಿಕೊಂಡು ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಕೊನೆಯ ಹಂತದ ನ್ಯಾಯಕ್ಕಾಗಿ ಹೋರಾಟ ಪ್ರಾರಂಭಿಸಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ಸಮಯದಿಂದ ತನ್ನ ನಿರ್ಣಯಗಳಲ್ಲಿ ಸದಾ ಜನ ಹಿತ ಹಾಗೂ ಜನ ಪರ ಎಂಬುದು ದೃಡಿಕರಿಸಿದೆ. ಈಗ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ಹೋರಾಟ ಆರಂಭಿಸಿದೆ.
ಈ ಮಹತ್ತರವಾದ ಸಮಯದಲ್ಲಿ ಕೇಂದ್ರ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಕೇಂದ್ರ ಸಚಿವರು ಮಲೆನಾಡಿನ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಸೂಕ್ತ ರೀತಿಯಲ್ಲಿ ಹೋರಾಟ ನಡೆಸಿ ಹೊಸ ಮೈಲಿಗಲ್ಲು ಸ್ಥಾಪಿಸುವ ಮಹಾದಾಸೆ ಹಾಗೂ ಭರವಸೆ ನಮಗೆಲ್ಲ ಮೂಡಿದೆ.
ಈ ಕುರಿತು ಇಂದು ಸದನದನಲ್ಲಿ ಸಂಸದ ಬಿ ವೈ ರಾಘವೇಂದ್ರ ಅವರು ಶರಾವತಿ ಹಿನ್ನೀರಿನ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ತೆರೆದಿಟ್ಟು ಗಮನ ಸೆಳೆದರು. ಪುನರ್ವಸತಿ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ದಿಟ್ಟ ಕ್ರಮ ತೆಗೆದುಕೊಳ್ಳುವಂತೆ ಮತ್ತೊಮ್ಮೆ ಆಗ್ರಹ ಪೂರ್ವಕವಾಗಿ ಮನವಿ ಮಾಡಲಾಯಿತು.
PublicNext
11/12/2024 08:21 pm