ಪಾಟ್ನಾ: ಡಬಲ್ ಎಂಜಿನ್‌ನ ಎನ್‌ಡಿಎ ಡಬಲ್ ಯುವರಾಜರಿಗೆ ಸೋಲುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಬಿಹಾರದಲ್ಲಿ ಎರಡನೇ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ, 'ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಮತ್ತೆ ಗೆಲುವು ಸಾಧಿಸಲಿದೆ. ಬಿಹಾರದ ವಿಪಕ್ಷಗಳು ಯಾವಾಗಲೂ ಬಡವರ ಹಣಕ್ಕೆ ಕನ್ನ ಹಾಕುತ್ತವೆ. ಬಿಹಾರದ ಅಭಿವೃದ್ಧಿ ಬಗ್ಗೆ ಚಿಂತಿಸಲು ಸಾಧ್ಯವಿಲ್ಲದ ಡಬಲ್-ಡಬಲ್ ಯುವರಾಜರು ತಮ್ಮ ಪಟ್ಟ ಭದ್ರ ಮಾಡಿಕೊಳ್ಳಲು ಎನ್ಡಿಎಯ ಡಬಲ್ ಎಂಜಿನ್ ಸರ್ಕಾರದ ವಿರುದ್ಧ ಕದನಕ್ಕೆ ನಿಂತಿದ್ದಾರೆ' ಎಂದು ಕುಟುಕಿದರು.
PublicNext
01/11/2020 09:53 pm