ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ನಾಯಕಿ, ನಟಿ ಖುಷ್ಬೂ ಬಂಧನ

ಚೆನ್ನೈ- ಪ್ರತಿಭಟನೆಯಲ್ಲಿ ತೊಡಗಿದ್ದ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಂಸದ ಹಾಗೂ ವಿಸಿಕೆ ಪಕ್ಷದ ನಾಯಕ ತಿರುಮವಾಲವನ್ ಅವರು ಮನುಸ್ಮೃತಿ ಬಗ್ಗೆ ವಿವಾದಾಸ್ಪದ ಹೇಳಿಕೆ ನೀಡಿದ್ದರು‌. ಈ ಹೇಳಿಕೆ ವಿರೋಧಿಸಿ ಅವರ ಮನೆ ಎದುರು ಪ್ರತಿಭಟನೆ ನಡೆಸಲು ನಟಿ ಖುಷ್ಬೂ ತೆರಳುತ್ತಿದ್ದರು‌. ಈ ವೇಳೆ ಸ್ಥಳೀಯ ಪೊಲೀಸರು ಅಲ್ಲಿದ್ದ ಕಾರ್ಯಕರ್ತರ ಸಮೇತ ಅವರನ್ನೂ ಬಂಧಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಖುಷ್ಬೂ ಮಹಿಳೆಯರ ಘನತೆಗಾಗಿ ನಾವು ಕೊನೆ ಉಸಿರಿನವರೆಗೂ ಹೋರಾಡುತ್ತೇವೆ‌‌. ಹೊರತಾಗಿ ದೌರ್ಜನ್ಯಕ್ಕೆ ಎಂದೂ ತಲೆಬಾಗುವುದಿಲ್ಲ ಎಂದಿದ್ದಾರೆ‌.

Edited By : Nagaraj Tulugeri
PublicNext

PublicNext

27/10/2020 11:44 am

Cinque Terre

51.82 K

Cinque Terre

6

ಸಂಬಂಧಿತ ಸುದ್ದಿ